RTE ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುವ ಹೆತ್ತವರ ಗಮನಕ್ಕೆ…

594

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 1 ರಿಂದ 8ನೇ ತರಗತಿವರೆಗೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಬಯಸುವ ಹೆತ್ತವರಿಗೆ ಇಲ್ಲೊಂದು ಅತಿ ಮುಖ್ಯವಾದ ಮಾಹಿತಿಯಿದೆ.

ಆರ್ ಟಿಇ ಅಡಿಯಲ್ಲಿ ಶಾಲೆಗೆ ಸೇರಿಸಲು ಮಾರ್ಚ್ 26 ರಿಂದ ಏಪ್ರಿಲ್ 20ರ ವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಏಪ್ರಿಲ್ 27ರಂದು ಲಾಟರಿ ಮೂಲಕ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೇ 5 ರಿಂದ ದಾಖಲಾತಿ ಕೆಲಸ ನಡೆಯುತ್ತೆ. ಮೊದಲು ಸರ್ಕಾರಿ, ನಂತರ ಅನುದಾನಿತ, ಕೊನೆಯಲ್ಲಿ ಖಾಸಗಿ ಶಾಲೆಗಳ ಸೀಟು ಆಯ್ಕೆ ನಡೆಯುತ್ತೆ.

ಮಾರ್ಚ್ 9ರಂದು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ತಾತ್ಕಾಲಿಕ ಲಿಸ್ಟ್ ಬಿಡುಗಡೆಯಾಗುತ್ತೆ. ಮಾರ್ಚ್ 16 ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ. ಮಾರ್ಚ್ 19 ಸುತ್ತಲಿನ ಶಾಲೆಗಳ ಅಂತಿಮ ಲಿಸ್ಟ್ ಹಾಗೂ ಲಭ್ಯವಿರುವ ಸೀಟುಗಳ ಬಗ್ಗೆ ಮಾಹಿತಿ ಹೊರ ಬೀಳಲಿದೆ.


TAG


Leave a Reply

Your email address will not be published. Required fields are marked *

error: Content is protected !!