ಗುಮ್ಮಟನಗರಿಯಲ್ಲಿ ಅಂಗಡಿಗಳ ಕಳ್ಳತನ

267

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಅಂಗಡಿಗಳ ಹಿಂದಿನ ಮೇಲ್ಛಾವಣಿ ಮುರಿದು ಒಳ್ಳತನ ನಡೆಸಿರುವ ಕೃತ್ಯ ಶನಿವಾರ ನಗರದ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ಕಳ್ಳನೊಬ್ಬ ಎರಡು ಅಂಗಡಿಗಳಿಗೆ ಕನ್ನ ಹಾಕಿದ್ದಾನೆ.

ಇರ್ಫಾನ್ ಮೊಮಿನ್ ಹಾಗೂ ಜಮೀಲ್ ಹರಿಯಾಳ್ ಎಂಬುವರ ಪಾನ್ ಶಾಪ್ ನಲ್ಲಿ ಕಳ್ಳತನ ನಡೆದಿದೆ. ಸಾವಿರಾರು ರೂಪಾಯಿ, ಸಾವಿರಾರು ರೂಪಾಯಿ ಮೌಲ್ಯದ ಸಿಗರೇಟ್ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.

ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಿಳಿ ಅಂಗಿ, ನೀಲಿ ಜೀನ್ಸ್ ಪ್ಯಾಂಟ್ ಹಾಕಿದ್ದು, ಮುಖ ಕವರ್ ಆಗುವ ರೀತಿಯಲ್ಲಿ ಅಂಗಡಿ ಒಳಗೆ ಇಳಿದು ಕಳ್ಳತನವೆಸಗಿದ್ದಾನೆ. ಗಾಂಧಿ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕೃತ ನಡೆದಿದೆ.




Leave a Reply

Your email address will not be published. Required fields are marked *

error: Content is protected !!