ಧಾರವಾಡ ಕೆಎಸ್ಐಎಸ್ಎಫ್ ಇನ್‌ಸ್ಪೆಕ್ಟರ್‌ಗೆ ಎಸ್ಪಿ ನೋಟಿಸ್ ಕೊಟ್ಟಿದ್ಯಾಕೆ?

403

ಪ್ರಜಾಸ್ತ್ರ ಸುದ್ದಿ

ಧಾರವಾಡ: ಇಲ್ಲಿನ ಕೆಎಸ್‌ಐಎಸ್‌ಎಫ್ ಕಚೇರಿ ಆವರಣದಲ್ಲಿದ್ದ ಬೃಹತ್ ಮರವೊಂದನ್ನು ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೆ ಕಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ರಾಜಕುಮಾರ ಪತ್ತಾರ ಅವರಿಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ಧಾರವಾಡದ ಕೆಎಸ್‌ಐಎಸ್‌ಎಫ್ ಕಚೇರಿಯ ಮುಂಭಾಗದಲ್ಲೇ ಈ ಬೃಹತ್ ಮರವಿತ್ತು. ಆಗಸ್ಟ್ 15ರ ಧ್ವಜಾರೋಹಣಕ್ಕೆ ಈ ಮರ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ಇನ್‌ಸ್ಪೆಕ್ಟರ್ ಪತ್ತಾರ ಅವರು, ಅರಣ್ಯ ಇಲಾಖೆಯ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಅದನ್ನು ತರಾತುರಿಯಲ್ಲಿ ಕತ್ತರಿಸಿ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಎಸ್ಪಿ ಅವರು ನೋಟಿಸ್ ಕಳಿಸಿದ್ದಾರೆ.

ಈ ಬಗ್ಗೆ ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ರಾಜಕುಮಾರ ಪತ್ತಾರ ಅವರೊಂದಿಗೆ ‘ಪ್ರಜಾಸ್ತ್ರ’ ಮಾತನಾಡಿದಾಗ ಅವರು ಹೇಳಿದ್ದು ಹೀಗೆ..

ಗಿಡ ಮುರಿದು ಬೀಳುವ ಹಂತದಲ್ಲಿತ್ತು. ಅರಣ್ಯ ಇಲಾಖೆದವರಿಗೆ ಹೇಳಿದ ನಂತರ, ಬಂದು ಕಡಿದಿದ್ದಾರೆ. ಖಾಸಗಿಯವರು ಯಾರು ಕಡಿದಿಲ್ಲ. ದೊಡ್ಡ ಗಿಡಗಳನ್ನು ಕಡಿಯಲಾಗಿದೆ ಎಂದು ಯಾರೋ ಸಾಹೇಬರಿಗೆ ತಪ್ಪು ಮಾಹಿತಿ ನೀಡಿದ್ದರು. ಅನುಮತಿ ಪಡೆದು ಕಡಿಯಲಾಗಿದೆ. ಅದನ್ನು ಅಧಿಕಾರಿಗಳಿಗೆ ಸಲ್ಲಿಸಲಾಗಿದೆ.

ರಾಜಕುಮಾರ ಪತ್ತಾರ,
ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್

ಅನುಮತಿ ಪಡೆಯದೆ ಮರ ಕಡಿಯಲಾಗಿದೆ ಎಂದು ನೋಟಿಸ್ ನೀಡಲಾಗಿದೆ. ಅನುಮತಿ ಪಡೆದು ಅರಣ್ಯ ಇಲಾಖೆಯವರೆ ಬಂದು ಮರ ಕಡಿದಿದ್ದಾರೆ ಅನ್ನೋದು ಇನ್‌ಸ್ಪೆಕ್ಟರ್ ಅವರ ಮಾತು. ಇದರಲ್ಲಿ ಯಾವುದು ಸತ್ಯ ಅನ್ನೋದು ಧಾರವಾಡ ಭಾಗದ ಪರಿಸರ ಪ್ರೇಮಿಗಳ ಪ್ರಶ್ನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!