2 ಸಾವಿರ ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಾಣ: ಬೊಮ್ಮಾಯಿ

565

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬೆಡ್ ಸಮಸ್ಯೆ ಪರಿಹಾರ ಸಂಬಂಧ ಇನ್ನೆರಡು ದಿನಗಳಲ್ಲಿ ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಿಸಲಾಗ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹೋಟೆಲ್ ಉದ್ಯಮಿಗಳ ಸಂಘ, ಖಾಸಗಿ ಆಸ್ಪತ್ರೆಗಳ ಸಂಘ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆಗಿನ ಸಭೆಯ ಬಳಿಕ ಈ ವಿಷಯ ತಿಳಿಸಿದ್ರು.

ಈಗಾಗ್ಲೇ 1,200 ಸ್ಟೆಪ್ ಡೌನ್ ಆಸ್ಪತ್ರೆ ನಿರ್ಮಿಸಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಪಕ್ಕದಲ್ಲಿಯೇ ಬೃಹತ್ ಹೋಟೆಲ್ ಗಳಿವೆ. ಇದಕ್ಕಾಗಿ 13 ಆಸ್ಪತ್ರೆಗಳ ಜೊತೆಗೆ ಹೋಟೆಲ್ ಜೋಡಣೆ ಮಾಡಲಾಗಿದೆ. ಇನ್ನಷ್ಟು ಹೋಟೆಲ್ ಗಳ ಜೋಡಣೆ ಕೆಲಸ ನಡೆದಿದೆ ಎಂದರು.

ಇನ್ನು ಬೆಡ್ ನೀಡದ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಟಾಟಾನಗರ, ಓರಿಸ್ಸಾ ಸೇರಿ ಇತರೆ ಕಡೆಗಳಿಂದ ಆಕ್ಸಿಜನ್ ಬರಬೇಕಿದೆ. ಆಕ್ಸಿಜನ್ ಟ್ಯಾಂಕರ್ ಗಳು ಬಂದ ನಂತರ ರೀಫಿಲ್ ಮಾಡಲು ಸಮಸ್ಯೆ ಇಲ್ಲ. ಹಾಗೇ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗಲಿದೆ ಎಂದರು.        




Leave a Reply

Your email address will not be published. Required fields are marked *

error: Content is protected !!