ವಿದ್ಯಾರ್ಥಿನಿ ಆತ್ಮಹತ್ಯೆ

435

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ನೀನಾ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ.

ಕಾಸರಗೋಡಿನ ತೊಂಬುಂಗಲ್ ಅರಿಂಬಾ ಮೂಲದ ನಿವಾಸಿ, ನಗರದ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ನರ್ಸಿಂಗ್ ಓದುತ್ತಿದ್ದಳು. ಮಂಗಳವಾರ ಸಂಜೆ ಬಾತ್ ರೂಮಿನಲ್ಲಿ ವಿದ್ಯಾರ್ಥಿನಿ ನೇಣು ಹಾಕಿಕೊಂಡಿದ್ದಾಳೆ. ಇದನ್ನು ನೋಡಿದ ಇನ್ನೋರ್ವ ವಿದ್ಯಾರ್ಥಿನಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.

ಘಟನೆ ಬಗ್ಗೆ ತಿಳಿದ ಹಾಸ್ಟೆಲ್ ಸಿಬ್ಬಂದ ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ವಿದ್ಯಾರ್ಥಿನಿ ಬುಧುವಾರ ಮೃತಪಟ್ಟಿದ್ದಾಳೆ. ಹಾಸ್ಟೆಲ್ ಸಿಬ್ಬಂದಿಯ ಕಿರುಕುಳವೇ ಇದಕ್ಕೆಲ್ಲ ಕಾರಣವೆಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!