ವಿದ್ಯಾರ್ಥಿಗಳ ಲಿಪ್ ಕಿಸ್ ಕೇಸ್: ಮಂಗಳೂರು ಎಸ್ಪಿ ಹೇಳಿದ್ದೇನು?

192

ಪ್ರಜಾಸ್ತ್ರ ಸುದ್ದಿ

ಮಂಗಳೂರು: ದಿನಗಳು ಕಳೆದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳ ನಡೆ, ನುಡಿಯಲ್ಲಿ ಹಾದಿ ತಪ್ಪುತ್ತಿರುವುದು ಹೆಚ್ಚಾಗುತ್ತಿದೆ. ಮೋಜು, ಮಸ್ತಿ, ಆಟ, ಬೆಟ್ಟಿಂಗ್ ನೆಪದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ಜಾತಾ ಉದಾಹರಣೆ ಮಂಗಳೂರಿನ ಪ್ರತಿಷ್ಠಿತ ಕಾಲೇಜುವೊಂದರ ವಿದ್ಯಾರ್ಥಿಗಳು ಲಿಪ್ ಕಿಸ್ ವಿಡಿಯೋ ವೈರಲ್ ಆಗಿರುವುದು.

ಖಾಸಗಿ ಕಾಲೇಜು ವಿದ್ಯಾರ್ಥಿಗಳ ನಡುವೆ ಸ್ಪರ್ಧೆ ನಡೆದಿದೆ. ಈ ವೇಳೆ ಲಿಪ್ ಕಿಸ್ ಮಾಡಲಾಗಿದೆ. ಉಳಿದ ವಿದ್ಯಾರ್ಥಿಗಳು ಅವರಿಗೆ ಸಪೋರ್ಟ್ ಮಾಡಿದ್ದಾರೆ. ಇದೀಗ ಅದು ವೈರಲ್ ಆಗಿದ್ದು, ಈ ಬಗ್ಗೆ ಎಸ್ಪಿ ಶಶಿಕುಮಾರ್ ಮಾತನಾಡಿದ್ದು, ವಿದ್ಯಾರ್ಥಿಗಳ ಯೂನಿಫಾರಂ ಮೂಲಕ ಯಾವ ಕಾಲೇಜಿನವರು ಎಂದು ತಿಳಿದು ಬಂದಿದೆ. ಕಳೆದ ಜನವರಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತದೆ. ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಎರಡು ತಿಂಗಳು ಮಾತ್ರ ಇಬ್ಬರು ವಿದ್ಯಾರ್ಥಿಗಳು ರೂಂ ಬಾಡಿಗೆ ಪಡೆದಿದ್ದರಂತೆ. ಆದರೆ, ಷರತ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ರೂಂ ಖಾಲಿ ಮಾಡಿಸಲಾಗಿದೆಯಂತೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಇನ್ನು ವಿಡಿಯೋ ವೈರಲ್ ಆಗಿ ಕಾಲೇಜಿಗೆ ಮುಜುಗರ ತಂದ ಘಟನೆಯಿಂದಾಗಿ ಕಾಲೇಜು ಆಂತರಿಕ ಸಲಹಾ ಸಮಿತಿಯ ತನಿಖೆ ಬಳಿಕ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಟ್ರು ಅಂಡ್ ಡೇರ್ ಸ್ಪರ್ಧೆ ನಡೆಯುವಾಗಿ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದಾರಂತೆ. ಈ ಕುರಿತು ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!