ನನ್ನ ಹೆಸರು ಬಳಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ

280

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಶಾಲಾ ಮಕ್ಕಳ ಸ್ವೆಟರ್ ಟೆಂಡರ್ ದಲ್ಲಿ ಗೋಲ್ಮಾಲ್ ನಡೆದಿದೆ ಅನ್ನೋ ವಿಚಾರದಲ್ಲಿ ನಟ ಕೋಮಲ್ ಅವರ ಹೆಸರು ಕೇಳಿ ಬಂದಿದ್ದು, ಅವರ ವಿರುದ್ಧ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೋಮಲ್, ನಾನು ಸ್ವೆಟರ್ ಟೆಂಡರ್ ನಲ್ಲೂ ಭಾಗಿಯಾಗಿಲ್ಲ. ಸೆಲೆಬ್ರಿಟಿ ಹೆಸರು ಬಳಸಿಕೊಂಡು ಪ್ರಚಾರ ಪಡೆಯುವುದಕ್ಕೆ ನೋಡ್ತಿದ್ದಾರೆ. ಅಂತವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ.

ಬಿಬಿಎಂಪಿ ತನ್ನ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಪ್ರತಿ ವರ್ಷ ಸ್ವೆಟರ್ ನೀಡುತ್ತೆ. ಅದಕ್ಕಾಗಿ ಟೆಂಡರ್ ಕರೆಯುತ್ತೆ. ಅದರಂತೆ ಕಳೆದ ವರ್ಷದ ಟೆಂಡರ್ ನಲ್ಲಿ ನಟ ಕೋಮಲ್ ಪಡೆದುಕೊಂಡಿದ್ದು, ಹಣ ಸಹ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದ್ರೆ, ಕಳೆದ ವರ್ಷ ಶಾಲೆಗಳೇ ನಡೆದಿಲ್ಲ. ಆದರೂ ಸ್ವೆಟರ್ ವಿತರಣೆ ಮಾಡಲಾಗಿದೆ ಎಂದು ಹಣ ಪಡೆದಿದ್ದಾರೆ ಅಂತಾ ದಲಿತ ಸಂಘರ್ಷ ಸಮಿತಿ ಆರೋಪಿಸಿ ಪ್ರತಿಭಟನೆ ನಡೆಸಿದೆ.

ಇನ್ನು ಒಂದು ವೇಳೆ ಹಣ ಬಿಡುಗಡೆಯಾಗಿದ್ದೇ ಆದರೆ, ಯಾರಿಗೆ ಆಗಿದೆ? ಶಾಲೆ ನಡೆಯದೇ ಬಿಬಿಎಂಪಿ ಅದ್ಹೇಗೆ ಟೆಂಡರ್ ಕರೆದು ಹಣ ಬಿಡುಗಡೆ ಮಾಡಿದೆ ಅನ್ನೋದರ ಕುರಿತು ಸಹ ತನಿಖೆ ನಡೆಯಬೇಕಿದೆ.




Leave a Reply

Your email address will not be published. Required fields are marked *

error: Content is protected !!