ರಾಜ್ಯದಲ್ಲಿಂದು 14,738 ಕೋವಿಡ್ ಪ್ರಕರಣ

233

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 14,738 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 11,096,50ಕ್ಕೆ ಏರಿಕೆಯಾಗಿದೆ. 3591 ಜನರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದುವರೆಗೂ ಆಸ್ಪತ್ರೆಯಿಂದ 9,99,958 ಜನರು ಬಿಡುಗಡೆಯಾಗಿದ್ದಾರೆ. 96,561 ಪ್ರಕರಣಗಳು ಸಕ್ರಿಯವಾಗಿವೆ. 66 ಜನರು ಕರೋನಾದಿಂದ ಮೃತಪಟ್ಟಿದ್ದು ಸಾವಿನ ಸಂಖ್ಯೆ 13,112ಕ್ಕೆ ಏರಿಕೆಯಾಗಿದೆ. ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರು ಎಂದು ನೋಡಿದ್ರೆ..

ಬೆಂಗಳೂರು ನಗರ 10,497, ಕಲಬುರಗಿ 624, ತುಮಕೂರು 387, ಬೀದರ 363, ಮೈಸೂರು 327, ಮಂಡ್ಯ 211, ಬಳ್ಳಾರಿ 200, ಹಾಸನ 186, ಧಾರವಾಡ 179, ಬೆಂಗಳೂರು ಗ್ರಾಮಾಂತರ 171, ದಕ್ಷಿಣ ಕನ್ನಡ 166, ಬೆಳಗಾವಿ 135, ವಿಜಯಪುರ 136, ಚಿಕ್ಕಬಳ್ಳಾಪುರ 127, ಕೊಪ್ಪಳ 118, ಉಡುಪಿ 111 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!