ಬೆಳಗ್ಗೆ 11ಕ್ಕೆ ನೂತನ ಪರಿಷತ್ ಸದಸ್ಯರ ಪ್ರದಗ್ರಹಣ

442

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಲಿದೆ. 5 ಜನ ಬಿಜೆಪಿ ಎಂಎಲ್ ಸಿಗಳ ಪದಗ್ರಹಣ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ವಿಧಾನಸೌದದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾರತಿ ಶೆಟ್ಟಿ, ಹೆಚ್.ವಿಶ್ವನಾಥ, ಸಿ.ಪಿ ಯೋಗೇಶ್ವರ, ಡಾ.ಸಾಬಣ್ಣ ತಳವಾರ ಹಾಗೂ ಶಾಂತರಾಮ ಸಿದ್ದಿ ಅವರು, ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 75 ವಿಧಾನ ಪರಿಷತ್ ಸ್ಥಾನಗಳಲ್ಲಿ 71 ಸದಸ್ಯರಿದ್ದು, ಶಿಕ್ಷಣ ಹಾಗೂ ಪದವೀಧರ ಕ್ಷೇತ್ರದಿಂದ 4 ಸ್ಥಾನಗಳು ಖಾಲಿ ಇದ್ದು ಕರೋನಾದಿಂದಾಗಿ ಚುನಾವಣೆ ಮುಂದೂಡಲಾಗಿದೆ.




Leave a Reply

Your email address will not be published. Required fields are marked *

error: Content is protected !!