ಹುಡುಗಿಯರೇ ಹುಷಾರ್.. ನಿಮ್ಮ ಫೋಟೋ ಪೋರ್ನ್ ವೆಬ್ ಸೈಟ್ ಗೆ ಹೋಗುತ್ತೆ!

971

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಇವತ್ತಿನ ಯುವ ಜನತೆ ಸದಾ ಬ್ಯುಸಿ. ಫೋಟೋ, ವಿಡಿಯೋ ಅಪ್ ಲೋಡ್ ಮಾಡುವುದರಲ್ಲಿ ಸದಾ ಮುಂದೆ ಇರ್ತಾರೆ. ಅದರಲ್ಲೂ ಹುಡ್ಗಿಯರು ಫೋಟೋ ಕ್ರೇಜ್ ಸಿಕ್ಕಾಪಟ್ಟೆ. ಹೀಗಾಗಿ ಸದಾ ತಮ್ಮ ವಿಭಿನ್ನ ಸ್ಟೈಲ್ ಫೋಟೋ ಪೋಸ್ಟ್ ಮಾಡ್ತಾರೆ. ಹೀಗೆ ಮಾಡುವ ಮೊದಲು ಹುಷಾರ್ ಆಗಿರಿ.

ಈ ಇಬ್ಬರು ಕಿರಾತಕರು ಸೋಷಿಯಲ್ ಮೀಡಿಯಾದಿಂದ ಹುಡಗಿಯರ ಫೋಟೋವನ್ನ ತೆಗೆದುಕೊಂಡು ಅಶ್ಲೀಲ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡ್ತಿದ್ರು. ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಹೆಣ್ಮಕ್ಕಳ ಫೋಟೋವನ್ನ ಸೋಷಿಯಲ್ ಮೀಡಿಯಾದಿಂದ ತೆಗೆದುಕೊಂಡು ಪೋರ್ನ್ ಸೈಟ್ ಗಳಿಗೆ ಅಪ್ಲೋಡ್ ಮಾಡ್ತಿರುವುದು ತಿಳಿದು ಬಂದಿದೆ.

ಹೀಗೆ ಫೋಟೋ ಕದ್ದು ಅಶ್ಲೀಲ ವೆಬ್ ಸೈಟ್ ಗಳಿಗೆ ಅಪ್ಲೋಡ್ ಮಾಡ್ತಿರುವುದು ಗಮನಕ್ಕೆ ಬಂದ ತಕ್ಷಣ ಕಾಲೇಜುಗಳ ಮುಖ್ಯಸ್ಥರು, ವಿದ್ಯಾರ್ಥಿನಿಯರು ದೂರು ನೀಡಿದ್ರು. ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರನ್ನ ಬಂಧಿಸಿದ್ದಾರೆ. ಬೆಂಗಳೂರು ಮೂಲದ 37 ವರ್ಷದ ಅಜಯ ತನಿಕಾಚಲಂ ಹಾಗೂ 27 ವರ್ಷದ ವಿಶ್ವಕ್ ಸೇನ್ ಅನ್ನೋ ಇಬ್ಬರನ್ನ ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಮುನ್ನ ಎಚ್ಚರಿಕೆಯಿಂದಿರಿ.




Leave a Reply

Your email address will not be published. Required fields are marked *

error: Content is protected !!