ಪೋರ್ನ್ ವೆಬ್ ಸೈಟ್ ಗೆ ಹುಡ್ಗೀಯರ ಫೋಟೋ ಅಪ್ಲೋಡ್ ಹಿಂದೆ ಲವ್ ಕಹಾನಿ

614

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಅಶ್ಲೀಲ ವೆಬ್ ಸೈಟ್ ಗೆ ನಗರದ ಪ್ರತಿಷ್ಠಿತ ಕಾಲೇಜಿನ ಕೆಲ ವಿದ್ಯಾರ್ಥಿನಿಯರ, ಪ್ರಿನ್ಸಿಪಾಲ್, ಟೀಚರ್ಸ್ ಫೋಟೋ ಅಪ್ಲೋಡ್ ಹಿಂದೆ ಒಂದು ಲವ್ ಕಹಾನಿ ಇದೆ. ತನ್ನ ಪ್ರೀತಿಯನ್ನ ನಿರಾಕರಿಸಿದ ಹುಡ್ಗಿಯ ಮೇಲಿನ ದ್ವೇಷಕ್ಕೆ ಅಜಯ ತನಿಕಾಚಲಂ ಅನ್ನೋ 37 ವರ್ಷದ ವ್ಯಕ್ತಿ, ಇಷ್ಟೆಲ್ಲ ಆಟವಾಡಿದ್ದಾನೆ.

ಪ್ರತಿಷ್ಠಿತ ಕಾಲೇಜಿನಲ್ಲಿ ಓದಿರುವ ಈತ ಇಂಜಿನಿಯರ್. ಓದುವ ಟೈಂನಲ್ಲಿ ಸಹಪಾಠಿಯನ್ನ ಪ್ರೀತಿ ಮಾಡ್ತಿದ್ದ. ಆದ್ರೆ, ಅವಳು ಒಪ್ಪಿಕೊಂಡಿರ್ಲಿಲ್ಲ. ಹೀಗಾಗಿ ಆಕೆ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಮುಂದೆ ಅದೆ ಕಾಲೇಜಿನ ವಿದ್ಯಾರ್ಥಿ ವಿಶ್ವಕ್ ಸೇನ್ ಎಂಬಾತನ ಪರಿಚಯ ಮಾಡಿಕೊಂಡಿದ್ದಾನೆ.

ವಿಶ್ವಕ್ ಸೇನ್ ಮೂಲಕ ಸುಮಾರು ಪ್ರಿನ್ಸಿಪಾಲ್, ಟೀಚರ್ಸ್, ವಿದ್ಯಾರ್ಥಿನಿಯರು ಸೇರಿ 30 ಜನರ ಸೋಷಿಯಲ್ ಮೀಡಿಯಾದಲ್ಲಿದ್ದ ಫೋಟೋಗಳನ್ನ ತೆಗೆದುಕೊಂಡಿದ್ದ. ಬಳಿಕ ಅವುಗಳನ್ನ ಎಡಿಟ್ ಮಾಡಿದ್ದಾನೆ. ಅವುಗಳನ್ನ ತೆಗೆದುಕೊಂಡು ಅಶ್ಲೀಲ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ. ಇದು ವೈರಲ್ ಆಗಿ ದೂರು ನೀಡಿದಾಗ ಇಬ್ಬರು ಐನಾತಿಗಳು ಸಿಕ್ಕಿಬಿದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!