ಇಂದಿನಿಂದ ಟಿಎಸ್ಆರ್ಟಿಸಿ ನೌಕರರು ಕೆಲಸಕ್ಕೆ ಹಾಜರಿ

324

ಹೈದ್ರಾಬಾದ್: ತೆಲಂಗಾಣ ರಸ್ತೆ ಸಾರಿಗೆ ಸಂಸ್ಥೆ ನೌಕರರು ಇಂದಿನಿಂದ ಕೆಲಸಕ್ಕೆ ಹಾಜರಿ ಆಗಲಿದ್ದಾರೆ. ಈ ಮೂಲಕ ಅವರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸಿಎಂ ಚಂದ್ರಶೇಖರ ರಾವ್ ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಿದ್ದಾರೆ.

ಈ ಬಗ್ಗೆ ಸಚಿವ ಸಂಪುಟ ನಡೆಸಿದ ಸಿಎಂ, ಹೊಸ ನಿಯಮಗಳನ್ನ ಜಾರಿಗೆ ತರಲಾಗಿದೆ. ಅದರಲ್ಲಿ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಇದರ ಜೊತೆಗೆ ಸಂಸ್ಥೆ ನಿರ್ವಹಣೆಗೆ ತಕ್ಷಣಕ್ಕೆ ನೂರು ಕೋಟಿ ಘೋಷಣೆ ಮಾಡಿದ್ದಾರೆ. ಇನ್ನು ಮುಂದಿನ ಸೋಮವಾರದಿಂದ ಕಿಲೋ ಮೀಟರ್ ಗೆ 20 ಪೈಸೆ ದರ ಏರಿಕೆ ಮಾಡಲು ಸಾರಿಗೆ ಸಂಸ್ಥೆ ಅನುಮತಿ ನೀಡಿದೆ.

ಕಳೆದ ಅಕ್ಟೋಬರ್ 5ರಿಂದ ಸುಮಾರು 50 ಸಾವಿರ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸ್ತಿದ್ರು. ಹೋರಾಟದ ಟೈಂನಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದು ಅಂತಾ ಕುಟುಂಬಗಳಿಗೆ ನೌಕರಿಗೆ ನೀಡಲು ನಿರ್ಧರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!