ಯುಪಿಎಸ್ ಸಿ ಫಲಿತಾಂಶ: ಮೊದಲ 4 ಸ್ಥಾನದಲ್ಲಿ ಹೆಣ್ಮಕ್ಕಳು

502

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಭಾರತೀಯ ಲೋಕಸೇವಾ ಆಯೋಗದ 2021ನೇ ಸಾಲಿನ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಮೊದಲ ನಾಲ್ಕು ಸ್ಥಾನಗಳಲ್ಲಿ ಹೆಣ್ಮಕ್ಕಳು ಮಿಂಚಿದ್ದಾರೆ. ಶ್ರುತಿ ಶರ್ಮಾ ಪ್ರಥಮ, ಅಂಕಿತಾ ಅಗರ್ವಾಲ್ ದ್ವಿತೀಯ, ಗಾಮಿನಿ ಸಿಂಗ್ಲಾ ತೃತೀಯ ಹಾಗೂ ಐಶ್ವರ್ಯ ವರ್ಮಾ 4ನೇ ಸ್ಥಾನ ಪಡೆದಿದ್ದಾರೆ.

ಐಎಎಸ್, ಐಪಿಎಸ್, ಐಎಫ್ಎಸ್ ಟಾಪರ್ ಗಳು ಸೇರಿದಂತೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಭಾರತೀಯ ಲೋಕಸೇವಾ ಆಯೋಗ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಒಟ್ಟು 761 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ 545 ಪುರುಷರು, 216 ಮಹಿಳೆಯರು ಆಯ್ಕೆಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!