ಪ್ರಜಾಸ್ತ್ರ ಕ್ರೀಡಾಸುದ್ದಿ
ಮಹಿಳೆಯರ ಟಿ-20 ಪಂದ್ಯಗಳಲ್ಲಿ ಸ್ಮೃತಿ ಮಂದಾನ ನಾಯಕತ್ವದ ಟ್ರೈಲ್ ಬ್ಲೇಜರ್ಸ್ ತಂಡ ವೆಲಾಸಿಟಿ ತಂಡದ ವಿರುದ್ಧ 9 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಮಿಥಾಲಿ ಪಡೆ ಕೇವಲ 47 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ.
ವೆಲಾಸಿಟಿ ತಂಡದ ಪರ ಶಫಾಲಿ ಶರ್ಮಾ 13, ಶಿಖಾ ಪಾಂಡೆ 10, ಕ್ಯಾಸ್ಪೆರೆಕ್ 11 ರನ್ ಗಳಿಸಿದ್ರೆ ಉಳಿದವರು ಸಿಂಗಲ್ ರನ್ ಗೆ ಔಟ್ ಆಗುವ ಮೂಲಕ ಕೇವಲ 47 ರನ್ ಗಳಿಸಿತು. ಸ್ಮೃತಿ ಮಂದಾನ ಟೀಂ 47 ರನ್ ಗಳ ಅಲ್ಪ ಗುರಿಯನ್ನ ಕೇವಲ 7.5 ಓವರ್ ಗಳಲ್ಲಿ ತಲುಪಿತು.
ದಿಯಾಂಡ್ರಾ ಡಾಟಿನ್ 29, ಮಂದಾನ 6, ರಿಚಾ ಘೋಶ್ 13 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರು. ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ ವೆಲಾಸಿಟಿ ಟೀಂ, ರನ್ ರೇಟ್ ಆಧಾರದ ಮೇಲೆ ಫೈನಲ್ ತಲುಪಿದೆ.