107 ಪಬ್, ಬಾರ್-ರೆಸ್ಟೋರೆಂಟ್ ಲೈಸೆನ್ಸ್ ರದ್ದು

364

ಬೆಂಗಳೂರಿನ: ನಗರದ ಸುಮಾರು 107 ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ಗಳ ಲೈಸೆನ್ಸ್ ರದ್ದು ಮಾಡಲಾಗಿದೆ. ಈ ಬಾರ್-ರೆಸ್ಟೋರೆಂಟ್, ಪಬ್ ಗಳಲ್ಲಿ ಡ್ಯಾನ್ಸ್ ಸೇರಿದಂತೆ ಮನೋರಂಜನೆ ಕಾರ್ಯಕ್ರಮಗಳನ್ನ ಆಯೋಜನೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ಮನೋರಂಜನೆ ಸ್ಥಳದ ನಿಯಂತ್ರಣ ಮತ್ತು ಪರವಾನಿಗೆ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ ಸಿಸಿಬಿ ಪೊಲೀಸ್ರು ಪರವಾನಿಗೆ ರದ್ದು ಪಡಿಸಿದ್ದಾರೆ. ಇವುಗಳ ಮಾಲೀಕರಿಗೆ ನೋಟಿಸ್ ಕೊಟ್ಟಿರುವ ಸಿಸಿಬಿ ಪೊಲೀಸ್ರು ಮೂಲ ಸೇವೆ ಉದ್ದೇಶ ಬಿಟ್ಟು ಮನರಂಜನೆ ಶುರು ಮಾಡಿದ್ರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ದೇ, ಗಸ್ತು ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!