ಖಾಕಿ ಲಾಠಿ ಏಟಿಗೆ ಬಾಲಕ ಸಾವು: ಇಬ್ಬರ ಅಮಾನತು

283

ಪ್ರಜಾಸ್ತ್ರ ಸುದ್ದಿ

ಲಕ್ನೋ: ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ 17 ವರ್ಷದ ಬಾಲಕಿಗೆ ಪೊಲೀಸರು ಮನಬಂದಂತೆ ಲಾಠಿ ಏಟು ಕೊಟ್ಟ ಕಾರಣ ಸಾವನ್ನಪ್ಪಿರುವ ಅಮಾನವೀಯ ಘಟನೆ ಉನ್ನಾವೋದಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಪೊಲೀಸರನ್ನ ಅಮಾನತು ಮಾಡಲಾಗಿದೆ.

ಉನ್ನಾವೋದ ಬಂಗರ್ಮೌ ಪಟ್ಟಣದಲ್ಲಿ ಬಾಲಕ ಮನೆ ಮುಂದೆ ತರಕಾರಿ ಮಾರುತ್ತಿದ್ದಾಗ, ಅಲ್ಲಿಗೆ ಬಂದ ಪೊಲೀಸರು ಅವನನ್ನ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮನಬಂದಂತೆ ಆತನಿಗೆ ಹೊಡೆದಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ.

ಪೊಲೀಸರು ಕ್ರೂರ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಅನ್ಯಾಯವಾಗಿ ಒಂದು ಜೀವ ಬಲಿಯಾಗಿರುವುದು ಮಾತ್ರ ದುರಂತ.




Leave a Reply

Your email address will not be published. Required fields are marked *

error: Content is protected !!