ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ತಂಡ ಮಾಜಿ ನಾಯಕ, ಹಿರಿಯ ಆಟಗಾರ ಕುಮಾರ ಸಂಗಕ್ಕರ್ ಮೇಲೆ ಫಿಕ್ಸಿಂಗ್ ಆರೋಪ ಕೇಳಿ ಬಂದಿದೆ. ಇದು 2011ರಲ್ಲಿ ನಡೆದ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿದಂತೆ ಆರೋಪ ಮಾಡಲಾಗಿತ್ತು. ಇದೀಗ ಅದರ ವಿಚಾರಣೆ ಮಾಡಲಾಗಿದೆ.
ಮಾಜಿ ಕ್ರೀಡಾ ಸಚಿವ ಮಹಿಂದಾನಂದ, ಲಂಕಾ ಕ್ರಿಕೆಟ್ ಟೀಂ ವಿರುದ್ಧ, 2011ರ ಫೈನಲ್ ಮ್ಯಾಚ್ ಗೆ ಸಂಬಂಧಿಸಿದಂತೆ ಆರೋಪ ಮಾಡಿದ್ರು. ಹೀಗಾಗಿ ಅಂದು ಟೀಂ ಮುನ್ನೆಡಿಸಿದ್ದ ಕುಮಾರ ಸಂಗಕ್ಕರನನ್ನ ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.