ಗುಜರಾತಿನಲ್ಲಿ ನಕಲ ಮದ್ಯ ಸೇವನೆಗೆ 24 ಜನರು ಬಲಿ

224

ಪ್ರಜಾಸ್ತ್ರ ಸುದ್ದಿ

ಅಹಮದಾಬಾದ್: ಗುಜರಾತಿನಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಭಾವ್ ನಗರದ ಐಜಿಪಿ ಅಶೋಕ್ ಕುಮಾರ್ ಅವರು ನೀಡಿರುವ ಮಾಹಿತಿ ಪ್ರಕಾರ, 15 ಮಂದಿ ಬೊಟಾಡ್ ಜಿಲ್ಲೆಯವರು, 9 ಜನರು ಅಹಮದಾಬಾದ್ ಗ್ರಾಮೀಣ ಭಾಗದವರಾಗಿದ್ದಾರೆ.

ದರ್ವಾಲ್ ತಾಲೂಕಿನಲ್ಲಿ ಮಂಗಳವಾರ ನಸುಕಿನ ಜಾವ 47 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ 24 ಜನರು ಮೃತಪಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಮುಖಂಡ ಮನಹರ್ ಪಟೇಲ್ 31 ಜನರು ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ಕಿಂಗ್ ಪಿನ್ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!