ಹೈ ಪ್ರೊಫೈಲ್ ವೇಶ್ಯಾವಾಟಿಕೆ: ದೊಡ್ಡ ಕುಳಗಳ ಹೆಸರು

439

ಪ್ರಜಾಸ್ತ್ರ ಸುದ್ದಿ

ಛತ್ತೀಸಗಡ: ಅಪರಾಧ ನಿಗ್ರಹ ದಳ ಹಾಗೂ ಸೈಬರ್ ವಿಭಾಗದ ಅಧಿಕಾರಿಗಳು ರಾಯಪುರದ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದಾದಗ ಹೈ ಪ್ರೊಫೈಲ್ ವೇಶ್ಯಾವಾಟಿಕೆ ಬಯಲಿಗೆ ಬಂದಿದೆ. ಬೆಂಗಳೂರು ಮೂಲದ ಯುವತಿ ಸೇರಿ 11 ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ.

ನೇಪಾಳ, ಮುಂಬೈ, ದೆಹಲಿ, ಗುಜರಾತ್ ಮೂಲದ ಯುವತಿಯರು ಹಾಗೂ ಕಿಂಗ್ ಪಿನ್ ಪೊಲೀಸರ ಅತಿಥಿಯಾಗಿದ್ದಾನೆ. ಯುವತಿಯರ ಫೋನ್ ನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಸೇವ್ ಆಗಿದ್ದು, ಅವರಿಗೆ ಕಾಲ್ ಮಾಡಿದ್ದಾರೆ. ಪ್ರಕರಣ ಪ್ರಾಥಮಿಕ ಹಂತದಲ್ಲಿರುವುದರಿಂದ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲವೆಂದು ಪೊಲೀಸರು ಹೇಳಿದ್ದಾರೆ.

ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಅಪರಾಧ ನಿಗ್ರಹ ದಳ ಹಾಗೂ ಸೈಬರ್ ಪೊಲೀಸರಿಗೆ ದೂರು ಬಂದಿತ್ತು. ಅದರ ಅನ್ವಯ ವಿಶೇಷ ಪೊಲೀಸ್ ತಂಡ ರಚನೆ ಮಾಡಿ ತನಿಖೆ ನಡೆಸಿದಾಗಿ ಮಾಂಸದಂಧೆ ಬಯಲಾಗಿದೆ.




Leave a Reply

Your email address will not be published. Required fields are marked *

error: Content is protected !!