3 ತಿಂಗಳ ಮಗು ಸೇರಿ ದಂಪತಿ ಸಾವು

224

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡದಲ್ಲಿನ ತೋಟದ ಮನೆಯೊಂದರಲ್ಲಿ ದಂಪತಿ ಹಾಗೂ 3 ತಿಂಗಳು ಮಗು ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಲ್ಲಪ್ಪ ಗಡಾದ(30), ಪತ್ನಿ ಸುಧಾ(24) ಹಾಗೂ 3 ತಿಂಗಳ ಮಗು ರೂಪಶ್ರೀ ಮೃತ ದುರ್ದೈವಿಗಳು.

2 ವರ್ಷಗಳ ಹಿಂದೆ ಮಲ್ಲಪ್ಪ ಹಾಗೂ ಸುಧಾ ಮದುವೆಯಾಗಿದ್ದಾರೆ. ತಾಯಿ ಹಾಗೂ ಮಗುವಿನ ಶಮ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಮಲ್ಲಪ್ಪನ ಶವ ಹಾಲ್ ನಲ್ಲಿ ಪತ್ತೆಯಾಗಿದೆ. ನೇಣು ಬೀಗಿದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹವೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!