ಎಲ್ಲರನ್ನು ಕಾಡುತ್ತಿದೆ ಔಟ್ ನಾಟೌಟ್ ಆಗಿದ್ದೇಗೆ?

206

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಬುಧಾಬಿ: ಬುಧವಾರ ರಾತ್ರಿ ಭಾರತ ಹಾಗೂ ಅಫ್ಗಾನಿಸ್ತಾನ್ ನಡುವೆ ಪಂದ್ಯ ನಡೆದಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಶೇಖ್ ಝಯೇದ್ ಕ್ರಿಕೆಟ್ ಅಂಗಳದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದೆ. ಹೀಗಾಗಿ 2 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು.

ಇದು ಈ ಬಾರಿಯ ಐಸಿಸಿ ವರ್ಲ್ಡ್ ಕಪ್ ಟೂರ್ನಿಯ ಗರಿಷ್ಟ ಸ್ಕೋರ್ ಆಗಿದೆ. ಈ ಗುರಿಯನ್ನು ಬೆನ್ನುಹತ್ತಿದ ಅಫ್ಗನ್ ತಂಡ 7 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿ ಸೋಲು ಕಂಡಿತು. ಆದರೆ, 19ನೇ ಓವರ್ ನಲ್ಲಿ ಶೆಮಿ ಬೌಲಿಂಗ್ ಮಾಡಿದಾಗ ಕರೀಮ್ ಜನತ್ ಸಿಕ್ಸರ್ ಎತ್ತಿದ್ದಾರೆ. ಅದು ಬೌಂಡರಿ ದಾಟಲು ಸಾಧ್ಯವಾಗಿಲ್ಲ.

ಇದನ್ನು ಭರ್ಜರಿಯಾಗಿ ರವೀಂದ್ರ ಜಡೇಜಾ ಕ್ಯಾಚ್ ಹಿಡಿದಿದ್ದಾರೆ. ಫೀಲ್ಡ್ ಅಂಪೈರ್ ಔಟ್ ಕೊಟ್ಟು ಥರ್ಡ್ ಅಂಪೈರ್ ಸೂಚಿಸಿದ್ದಾರೆ. ಈ ವೇಳೆ ಇದನ್ನು ನಾಟೌಟ್ ಎಂದು ನೀಡಲಾಗಿದೆ. ಈ ವಿಡಿಯೋ ನೋಡಿದ ಕ್ರಿಕೆಟ್ ಪಂಡಿತರಿಗೂ ಶಾಕ್ ಆಗಿದ್ದು, ಔಟ್ ನಾಟೌಟ್ ಆಗಿದ್ದೇಗೆ ಅನ್ನೋ ಪ್ರಶ್ನೆ ಕಾಡುತ್ತಿದೆ.




Leave a Reply

Your email address will not be published. Required fields are marked *

error: Content is protected !!