ಒಂದೇ ದಿನದಲ್ಲಿ ದೇಶದಲ್ಲಿ 3 ಲಕ್ಷಕ್ಕೂ ಅಧಿಕ ಸೋಂಕಿತರು

228

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಇದೀಗ ಬರೀ ಕರೋನಾ 2ನೇ ಅಲೆಯ ಜೋರಾಗಿದೆ. ಅದು ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಲಕ್ಷ ಲಕ್ಷ ದಾಟುತ್ತಿದೆ. ಕಳೆದ 24 ಗಂಟೆಯಲ್ಲಿ 3,32,730 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಶುಕ್ರವಾರದವರೆಗೆ ದೇಶದಲ್ಲಿ 1,62,63,695 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 1,36,48,159 ಜನರು ಗುಣಮುಖರಾಗಿದ್ದಾರೆ. ಇನ್ನು 24 ಗಂಟೆಯಲ್ಲಿ 2,263 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ 2ನೇ ಅಲೆ ಎಲ್ಲದರ ಮೇಲೆ ಕರಿ ನೆರಳು ಬೀರಿದೆ.




Leave a Reply

Your email address will not be published. Required fields are marked *

error: Content is protected !!