ಇಂದಿನಿಂದ 3ನೇ ಹಂತದ ಲಾಕ್ ಡೌನ್: ರಾಜ್ಯದ ಈ ಭಾಗದಲ್ಲಿ ಸಡಿಲಿಕೆ

327

ಬೆಂಗಳೂರು: ಇಂದಿನಿಂದ 3ನೇ ಹಂತದ ಲಾಕ್ ಡೌನ್ ಶುರುವಾಗಿದೆ. ಮೇ 17ರ ತನಕ 3ನೇ ಹಂತದ ಲಾಕ್ ಡೌನ್ ಇರುತ್ತೆ. ಇದರ ನಡುವೆ ರಾಜ್ಯದಲ್ಲಿ ಕೆಲ ಭಾಗಗಳಲ್ಲಿ ಹಲವು ವಿಷಯಗಳಲ್ಲಿ ಸಡಿಲಿಕೆ ನೀಡಲಾಗಿದೆ. ಹೀಗಾಗಿ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಬರ್ತಿದೆ.

ರೆಡ್ ಝೋನ್, ಕಂಟೇನ್ಮೆಂಟ್ ಪ್ರದೇಶಗಳನ್ನ ಹೊರತು ಪಡಿಸಿ ಉಳಿದ ಕಡೆ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಜನರ ಓಡಾಟ, ವಾಹನ ಸಂಚಾರ, ನಿರ್ದಿಷ್ಟ ಅಂಗಡಿ ಮುಂಗಟ್ಟುಗಳ ವ್ಯಾಪಾರ ವಹಿವಾಟು, ಕಾರ್ಮಿಕರ ವಲಯದಲ್ಲಿ ಕೆಲಸ ಹೀಗೆ ಕೆಲ ನಿಯಮಗಳೊಂದಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಸಡಿಲಿಕೆ ಮಾಡಲಾಗಿದೆ.

ಇನ್ನು ರಾಜ್ಯದಲ್ಲಿ ಮದ್ಯ ಮಾರಾಟ ಶುರುವಾಗಿದೆ. ಎಂಎಸ್ಐಎಲ್ ಅಂಗಡಿಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯ ತನಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು. ಪಾರ್ಸಲ್ ವ್ಯವಸ್ಥೆ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದೆಲ್ಲವೂ ಮೇ 17ರ ವರೆಗೆ ಅನ್ವಯಿಸುತ್ತೆ.




Leave a Reply

Your email address will not be published. Required fields are marked *

error: Content is protected !!