ಮೂವರು ಕಳ್ಳರಿಂದ 5 ಕೋಟಿ ಮೌಲ್ಯದ ಕಾರು, ಬೈಕ್ ವಶ

257

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚಾರಣೆ ನಡೆಸಿ ಬರೋಬ್ಬರಿ 5 ಕೋಟಿ ಮೌಲ್ಯದ ಕಾರು ಹಾಗೂ ಬೈಕ್ ವಶ ಪಡಿಸಿಕೊಂಡಿದ್ದಾರೆ. 39 ಕಾರು ಹಾಗೂ 58 ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಅಲ್ದೇ, 3 ಕೋಟಿ ಮೌಲ್ಯದ 19 ಐಷಾರಾಮಿ ಕಾರುಗಳನ್ನ ಸೀಜ್ ಮಾಡಲಾಗಿದೆ. ಈ ಸಂಬಂಧ ಮೂವರನ್ನ ಬಂಧಿಸಲಾಗಿದೆ.

ನಸೀಬ್, ಮೊಹಮ್ಮದ ಅಜುಂ ಹಾಗೂ ಮಹೀರ್ ಖಾನ್ ಅನ್ನೋ ಮೂವರನ್ನ ಬಂಧಿಸಲಾಗಿದೆ. ಕಾರುಗಳನ್ನಮಾರಾಟ ಮಾಡಿಕೊಡುತ್ತೇವೆ ಎಂದು ಮಾಲೀಕರಿಗೆ ನಂಬಿಸಿ ವಂಚಿಸುತ್ತಿದ್ದರಂತೆ. ಮೈಸೂರು, ಚಿತ್ರದುರ್ಗ, ಭಟ್ಕಳ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ತಮ್ಮ ವಂಚನೆ ಆಟ ಆಡಿದ್ದಾರೆ.

ಪೂರ್ವ ವಿಭಾಗದ ಪೊಲೀಸರು ಕಾರ್ಯಾಚರಣೆ ಪ್ರಕರಣವನ್ನ ಬೇಧಿಸಿದ್ದಾರೆ.ಕೆ.ಜಿ ಹಳ್ಳಿ, ಬಾಣಸವಾಡಿ, ಪುಲಕೇಶಿನಗರ, ರಾಮಮೂರ್ತಿನಗರ, ಜೆ.ಬಿ ನಗರ, ಹಲಸೂರು, ಹೊಸಕೋಟೆ ಸೇರಿದಂತೆ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ.




Leave a Reply

Your email address will not be published. Required fields are marked *

error: Content is protected !!