ವರ್ಷದಲ್ಲಿ 300 ದಿನ ಮಲಗುವ ಆಧುನಿಕ ಕುಂಭಕರ್ಣ!

265

ಪ್ರಜಾಸ್ತ್ರ ಸುದ್ದಿ

ನಾಗ್ಪುರ: ಈ ವ್ಯಕ್ತಿ ವರ್ಷದಲ್ಲಿ 300 ದಿನ ಮಲಗಿಯೇ ಜೀವನ ಕಳೆಯುತ್ತಿದ್ದಾರೆ. ಹೀಗಾಗಿ ಈತನನ್ನ ಆಧುನಿಕ ಕುಂಭಕರ್ಣ ಎಂದು ಹೇಳಲಾಗ್ತಿದೆ. ಹಾಗಂತ ಈತ ಶುದ್ಧ ಸೋಮಾರಿ ಇದ್ದಾನೆ. ಮಾಡಲು ಕೆಲಸ ಇಲ್ಲವೆಂದು ಅಲ್ಲ. ಈತನ ಅತಿಯಾದ ನಿದ್ದೆಗೆ ಆಕ್ಸಿಸ್ ಹೈಪರ್ ಸೊಮ್ನಿಯಾ ಅನ್ನೋ ವಿಚಿತ್ರ ಕಾಯಿಲೆ.

ಅಂದ ಹಾಗೆ ಈತನ ಹೆಸರು ಪುರಖರಂ. ರಾಜಸ್ಥಾನದ ನಾಗ್ಪುರದ ಭದ್ವಾ ಗ್ರಾಮದ ನಿವಾಸಿ. ಆಕ್ಸಿಸ್ ಹೈಪರ್ ಸೊಮ್ನಿಯಾ ಅನ್ನೋ ಅತಿ ವಿರಳ ಕಾಯಿಲೆಯಿಂದ ಬಳಲುವರು ನಿದ್ದೆಯಲ್ಲಿಯೇ ಜೀವನ ಕಳೆಯುವುದಾಗಿದೆ. ಹೀಗಾಗಿ ಪುರಖರಂ ತಿಂಗಳಲ್ಲಿ ಐದು ದಿನ ಮಾತ್ರ ತಮ್ಮ ಕಿರಾಣಿ ಅಂಗಡಿಯನ್ನ ತೆರೆಯುತ್ತಾರೆ.

ಪ್ರಾರಂಭದ ದಿನಗಳಲ್ಲಿ 15 ಗಂಟೆ ನಿದ್ರಿಸುತ್ತಿದ್ದರಂತೆ. ದಿನಗಳು ಕಳೆದಂತೆ ಅದು 25 ದಿನಕ್ಕೆ ಬಂದು ನಿಂತಿದೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವುದ್ರಿಂದ ನಿದ್ದೆಯಲ್ಲಿಯೇ ಊಟ, ಸ್ನಾನವೆಂದು ಹೇಳಲಾಗ್ತಿದೆ. ರಾಮಾಯಣದಲ್ಲಿ ರಾವಣನ ಸಹೋದರ ಕುಂಭಕರ್ಣ ವರ್ಷದಲ್ಲಿ 6 ತಿಂಗಳು ನಿದ್ದೆಯಲ್ಲಿ ಇರ್ತಿದ್ದ ಅನ್ನೋದನ್ನ ಓದಿದ್ದೇವೆ. ಕನ್ನಡದಲ್ಲಿ ನಟ ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ ಮೆನ್ ಚಿತ್ರದಲ್ಲಿ ಇದೆ ರೀತಿ ನಿದ್ದೆ ಕಾಯಿಲೆಯಿಂದ ಹೀರೋ ಬಳಲುತ್ತಿರುವುದನ್ನ ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!