ಈ ದೇಶಗಳಂತೆ ಭಾರತ ಮಾಸ್ಕ್ ಫ್ರೀ ಆಗೋದು ಯಾವಾಗ?

349

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರೋನಾ 2ನೇ ಅಲೆಯಿಂದಾಗಿ ಭಾರತ ಸಂಪೂರ್ಣ ತತ್ತರಿಸಿ ಹೋಗಿದೆ. ಹೀಗಾಗಿ ವಿಶ್ವದ ಅನೇಕ ದೇಶಗಳು ಭಾರತವನ್ನ ನೋಡಿ ಕನಿಕರ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸ್ಥಿತಿ ನಿಜಕ್ಕೂ ಶೋಚನಿಯವಾಗಿದೆ. ಹೀಗಾಗಿ ದೇಶವಾಸಿಗಳು ಭಾರತ ಮಾಸ್ಕ್ ಫ್ರೀ ಆಗೋದು ಯಾವಾಗ ಅಂತಿದ್ದಾರೆ.

ನ್ಯೂಜಿಲೆಂಡ್, ಅಮೆರಿಕ, ಇಂಗ್ಲೆಂಡ್, ಭೂತಾನ್, ಇಸ್ರೇಲ್ ಸೇರಿ 5 ರಾಷ್ಟ್ರಗಳು ಮಾಸ್ಕ್ ಫ್ರೀ ಆಗಿವೆ. ಈ ರಾಷ್ಟ್ರಗಳಲ್ಲಿ ಶೇಕಡ 75ಕ್ಕಿಂತ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಮೂಲಕ ಕರೋನಾ ಗೆದ್ದು ಬೀಗುತ್ತಿವೆ. ಇಸ್ರೇಲ್ ನಲ್ಲಿ ಶೇಕಡ 70ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಭೂತಾನ್ ನಲ್ಲಿ ಶೇಕಡ 90ರಷ್ಟು ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.

 ಈ ರಾಷ್ಟ್ರಗಳಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿಯೇ ಮಾಸ್ಕ್ ಮುಕ್ತವಾಗಿ ಜೀವನ ನಡೆಸ್ತಿದ್ದಾರೆ. ಅಲ್ಲಿ ಲಾಕ್ ಡೌನ್ ಅನ್ನೋದು ಮುಗಿದು ಹೋಗಿದೆ. ಆದ್ರೆ, ನಮ್ಮಲ್ಲಿ ಇಂದಿಗೂ ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರ, ಕೈ ತೊಳೆದುಕೊಳ್ಳಿ ಎಂದು ಹೇಳುತ್ತಲೇ ನಿತ್ಯ ಸಾವಿರಾರು ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಜನರ ಪ್ರಾಣ ಉಳಿಸಬೇಕಾದವರು ಆರೋಪ ಪ್ರತ್ಯಾರೋಪ ಮಾಡಿಕೊಂಡು ವಿಶ್ವದ ಎದುರು ತಲೆ ತಗ್ಗಿಸುವಂತೆ ಮಾಡ್ತಿದ್ದಾರೆ. ಹೀಗಾಗಿ ಭಾರತೀಯರು ಇದ್ರಿಂದ ಹೊರ ಬರೋದು ಯಾವಾಗ ಅನ್ನೋ ಆತಂಕದಲ್ಲಿ ದಿನಗಳಲ್ಲಿ ಕಳೆಯುತ್ತಿರುವುದು ಮಾತ್ರ ದುರಂತ.

ಭಾರತದಲ್ಲಿ 26,252,579 ಕರೋನಾ ಕೇಸ್ ದಾಖಲಾಗಿವೆ. 294,794 ಸಾವು ಸಂಭವಿಸಿವೆ. 22,999,893 ಪ್ರಕರಣಗಳು ಗುಣಮುಖವಾಗಿವೆ.




Leave a Reply

Your email address will not be published. Required fields are marked *

error: Content is protected !!