62 ವರ್ಷದ ಬಳಿಕವೂ 7 ಮೊಟ್ಟೆಯಿಟ್ಟ ಹೆಬ್ಬಾವು

364

ಪ್ರಜಾಸ್ತ್ರ ಸುದ್ದಿ

ಅಮೆರಿಕಾದ ಮಿಸ್ಸೋರಿಯಲ್ಲಿ 62 ವರ್ಷದ ಬಳಿಕವೂ ಹೆಬ್ಬಾವುವೊಂದು 7 ಮೊಟ್ಟೆಗಳನ್ನಿಟ್ಟಿದೆ. ಈ ಮೂಲಕ ಇದೊಂದು ಅಪರೂಪದ ಘಟನೆ ಎನ್ನಲಾಗ್ತಿದೆ. ಮಸ್ಸೋರಿಯಾದ ಸೇಂಟ್ ಲೂಯಿಸ್ ಝೂನ್ ನಲ್ಲಿರುವ 62 ವರ್ಷದ ಬಾಲ್ ಪೈಥಾನ್ ಜಾತಿಯ ಹೆಬ್ಬಾವು 7 ಮೊಟ್ಟೆಗಳನ್ನ ಇಟ್ಟಿದೆ.

ಸಹಜವಾಗಿ 60 ವರ್ಷದ ನಂತರ ಇವುಗಳ ಸಂತಾನೋತ್ಪತ್ತಿ ಮಾಡುವುದಿಲ್ಲವೆಂದು ತಜ್ಞರು ಹೇಳುತ್ತಾರೆ. ಅಲ್ದೇ, ಲೈಂಗಿಕ ಕ್ರಿಯೆಯಲ್ಲಿ ಭಾಗವಹಿಸದೆ ಮೊಟ್ಟೆಗಳನ್ನ ಇಡುವ ಶಕ್ತಿಯನ್ನ ಹೊಂದಿರುತ್ತೇವೆ ಎಂದು ಸರಿಸೃಪ ತಜ್ಞ ಮಾರ್ಕ್ ವಾನ್ನೆರ್ ಹೇಳುತ್ತಾರೆ.

ವಿಶ್ವದ ಅತಿ ಹಿರಿಯ ಹೆಬ್ಬಾವು ಎಂದು ಹೇಳಲಾಗ್ತಿದ್ದು, 7 ಮೊಟ್ಟೆಗಳಲ್ಲಿ ಎರಡು ಹಾಳಾಗಿವೆ. 3 ಮೊಟ್ಟೆಗಳನ್ನ ಇನ್ಕೊಬೇಟರ್ ನಲ್ಲಿಡಲಾಗಿದೆ. 2 ಜೆನೆಟಿಕ್ ಸ್ಯಾಂಪಲ್ ಗೆ ಕಳುಹಿಸಲಾಗಿದೆಯಂತೆ. ಒಟ್ಟಿನಲ್ಲಿ ಸಹಜ ಸಂತಾನೋತ್ಪತ್ತಿ ಪ್ರಕ್ರಿಯೆ ಮೀರಿದ ವರ್ಷದ ಬಳಿಕ ಈ ಹೆಬ್ಬಾವು ಮೊಟ್ಟೆಗಳನ್ನ ಇಟ್ಟಿರುವುದು ಅಚ್ಚರಿ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!