ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ಡೊಳ್ಳು ಬೆಸ್ಟ್ ಮೂವಿ

173

ಪ್ರಜಾಸ್ತ್ರ ಸಿನಿಮಾ ಡೆಸ್ಕ್

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ತೀರ್ಪುಗಾರರು ಪತ್ರಗಳನ್ನು ಹಸ್ತಾಂತರಿಸಿದರು. 13 ರಾಜ್ಯಗಳ ಚಿತ್ರಗಳು ಇದರಲ್ಲಿ ಭಾಗವಹಿಸಿದ್ದವು.

ಪ್ರಾದೇಶಿಕ ಭಾಷೆಯ ಅತ್ಯುತ್ತಮ ಚಿತ್ರಗಳಲ್ಲಿ ಕನ್ನಡದ ಡೊಳ್ಳು ಆಯ್ಕೆ ಆಗಿದೆ. ಇನ್ನು ಅತ್ಯುತ್ತಮ ನಟ ಪ್ರಶಸ್ತಿ ತಮಿಳಿನ ಸೂರ್ಯ ಹಾಗೂ ಹಿಂದಿಯ ಅಜಯ್ ದೇವಗನ್ ಪಾಲಾಗಿದೆ. ಇದು ಸೂರರೈ ಪಟ್ರು ಚಿತ್ರದಲ್ಲಿನ ನಟನೆಗಾಗಿ. ಅಲ್ಲದೇ ಇದೆ ಚಿತ್ರದ ನಟಿ ಅಪರ್ಣಾ ಬಾಲಮುರುಳಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ. ಯಾರಿಗೆ ಯಾವ ಪ್ರಶಸ್ತಿ ಅನ್ನೋದು ಇಲ್ಲಿದೆ.

ಅತ್ಯುತ್ತಮ ಚಿತ್ರ: ಸೂರರೈ ಪೊಟ್ರು

ಅತ್ಯುತ್ತಮ ನಟ: ಸೂರ್ಯ (ಸೂರರೈ ಪೊಟ್ರು) ಮತ್ತು ಅಜಯ್ ದೇವಗನ್ (ತನ್ಹಾಜಿ)

ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ (ಸೂರರೈ ಪೊಟ್ರು)

ಅತ್ಯುತ್ತಮ ಗೀತರಚನೆಕಾರ: ಮನೋಜ್ ಮುಂತಾಶಿರ್ (ಸೈನಾ)

ಅತ್ಯುತ್ತಮ ಹಿಂದಿ ಚಿತ್ರ: ಟೂಲ್ಸಿದಾಸ್ ಜೂನಿಯರ್

ಅತ್ಯುತ್ತಮ ದಿಮಾಸಾ ಚಿತ್ರ: ಸೆಕ್ಮ್ ಖೋರ್

ಅತ್ಯುತ್ತಮ ತುಳು ಚಿತ್ರ: ಜೀತಗೆ

ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ

ಅತ್ಯುತ್ತಮ ತಮಿಳು ಚಿತ್ರ: ಶಿವರಂಜಿನಿಯುಮ್ ಇನ್ನುಮ್ ಸಿಲಾ ಪೆಂಗಲುಮ್

ಅತ್ಯುತ್ತಮ ಮಲಯಾಳಂ ಚಿತ್ರ: ಥಿಂಕಲಾಝ್ಚಾ ನಿಷ್ಕಯಂ

ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು

ಅತ್ಯುತ್ತಮ ಬಂಗಾಳಿ ಚಿತ್ರ: ಅವಿಜಾತ್ರಿಕ್

ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್

ನಾನ್ಫೀಚರ್ ಫಿಲ್ಮ್ ವಿಭಾಗದಲ್ಲಿ ಪ್ರಶಸ್ತಿಗಳು..!

ಅತ್ಯುತ್ತಮ ಸಂಗೀತ ನಿರ್ದೇಶನ: ವಿಶಾಲ್ ಭಾರದ್ವಾಜ್ (ಮರೇಂಗೆ ತೋ ವಹಿನ್ ಜಾ ಕರ್)

ಅತ್ಯುತ್ತಮ ಛಾಯಾಗ್ರಹಣ: ನಿಖಿಲ್ ಎಸ್ ಪ್ರವೀಣ್ (ಶಬ್ದಕುನ್ನ ಕಾಳಪ್ಪ)

ಅತ್ಯುತ್ತಮ ತನಿಖಾ ಚಿತ್ರ: ದಿ ಸೇವಿಯರ್: ಬ್ರಿಗೇಡಿಯರ್ ಪ್ರೀತಮ್ ಸಿಂಗ್

ಅತ್ಯುತ್ತಮ ಎಕ್ಸ್ ಪ್ಲೋರೇಶನ್ ಚಿತ್ರ: ವ್ಹೀಲಿಂಗ್ ದಿ ಬಾಲ್

ಅತ್ಯುತ್ತಮ ಶೈಕ್ಷಣಿಕ ಚಿತ್ರ: ಡ್ರೀಮಿಂಗ್ ಆಫ್ ವರ್ಡ್ಸ್ (ಮಲಯಾಳಂ)

ಸಾಮಾಜಿಕ ಸಮಸ್ಯೆಗಳ ಕುರಿತ ಅತ್ಯುತ್ತಮ ಚಿತ್ರ: ಜಸ್ಟೀಸ್ ಡಿಲೇಡ್ ಬಟ್ ಡೆಲಿವರ್ಡ್ ಮತ್ತು ತ್ರೀ ಸಿಸ್ಟರ್ಸ್

ಅತ್ಯುತ್ತಮ ಪ್ರಮೋಷನಲ್ ಚಿತ್ರ: ಸರ್ಮೌಂಟಿಂಗ್ ಚಾಲೆಂಜ್ಸ್

ಅತ್ಯುತ್ತಮ ಜೀವನಚರಿತ್ರೆ ಚಿತ್ರ: ಪಬುಂಗ್ ಶ್ಯಾಮ್ (ಮಣಿಪುರಿ)

ಅತ್ಯುತ್ತಮ ನಾನ್-ಫೀಚರ್ ಫಿಲ್ಮ್: ಟೆಸ್ಟಿಮೆಂಟೇಶನ್ ಆಫ್ ಅನಾ (ಡಾಂಗಿ)




Leave a Reply

Your email address will not be published. Required fields are marked *

error: Content is protected !!