ತಾಯಿಯ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಮಗ, ಪ್ರಧಾನಿ ಮೋದಿ

636

ಪ್ರಜಾಸ್ತ್ರ ಸುದ್ದಿ

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರು  ಡಿಸೆಂಬರ್ 30ರ ಬೆಳಗಿನ ಜಾವ ಸುಮಾರು 3.30ರ ಸಮಯದಲ್ಲಿ ವಿಧಿವಶರಾಗಿದ್ದಾರೆ. ಶತಾಯುಷಿ ಹೀರಾ ಬೆನ್ ಅವರಿಗೆ ಅಹಮದಾಬಾದ್ ನಲ್ಲಿರುವ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

ಗಾಂಧಿನಗರದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಯಿತು. ಭವ್ಯವಾದ ಶತಮಾನವು ದೇವರ ಪಾದದಲ್ಲಿ ನೆಲೆಸಿದೆ ಬರೆಯುವ ಮೂಲಕ ಟ್ವೀಟ್ ಮೂಲಕ ಅಗಲಿದ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ರಾಜಕೀಯ ಗಣ್ಯರು ವಿವಿಧ ಕ್ಷೇತ್ರದ ಗಣ್ಯಾತಿಗಣ್ಯರು ಅಂತಿಮ ನಮನ ಸಲ್ಲಿಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಅವರು ನಿಯೋಜಿತ ಕಾರ್ಯಕ್ರಮಗಳನ್ನು ಮುಂದೂಡದೆ. ಅವುಗಳಲ್ಲಿ ಅವರು ಭಾಗವಹಿಸಲಿ. ಆ ಮೂಲಕ ತಾಯಿಗೆ ಗೌರವ ನೀಡಲಿ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ನ್ಯಾಷನಲ್ ಗಂಗಾ ಕೌನ್ಸಿಲ್ ಸೇರಿದಂತೆ ಪಶ್ಚಿಮ ಬಂಗಾಳದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!