ಪ್ರಜಾಸ್ತ್ರ ಕ್ರೀಡಾ ಸುದ್ದಿ
ಐಪಿಎಲ್ 2024ರ ಟೂರ್ನಿಯಲ್ಲಿಯೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟವೇನು ಬದಲಾಗಿಲ್ಲ. ಹೀಗಾಗಿ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು 3ರಲ್ಲಿ ಸೋಲು ಅನುಭವಿಸಿದೆ. ಮಂಗಳವಾರ ಸಂಜೆ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 28 ರನ್ ಗಳಿಂದ ಸೋತಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ನಾಯಕ ಡುಪ್ಲಸಿಸ್ ಲೆಕ್ಕಾಚಾರ ಅಷ್ಟಾಗಿ ಕೈ ಹಿಡಿಯಲಿಲ್ಲ. ಹೀಗಾಗಿ ಕೆ.ಎಲ್ ರಾಹುಲ್ ಪಡೆ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಸಬ್ ಟ್ಯೂಟ್ ಪ್ಲೇಯರ್ ಆಗಿ ಕಣಕ್ಕೆ ಇಳಿದ ಕಿಂಟಾನ್ ಡಿಕಾಕ್ 5 ಸಿಕ್ಸ್, 8 ಫೋರ್ ಗಳೊಂದಿಗೆ 56 ಬೌಲ್ ಗಳಲ್ಲಿ 81 ರನ್ ಗಳಿಸಿದರು.
ಪೂರನ್ ಕೂಡ ಭರ್ಜರಿ 5 ಸಿಕ್ಸ್, 1 ಫೋರ್ ನೊಂದಿಗೆ 21 ಬೌಲ್ ಗಳಲ್ಲಿ ಅಜೇಯ 40 ರನ್ ಗಳಿಸಿದರು. ಕೆ.ಎಲ್ ರಾಹುಲ್ 20, ಸ್ಟೋನಿಸ್ 24 ರನ್ ಗಳಿಸಿದರು. ಲಖನೌ ತಂಡದಿಂದ 14 ಸಿಕ್ಸ್ ಗಳು ಬಂದವು. ಆರ್ ಸಿಬಿ ಪರ ಮ್ಯಾಕ್ಸ್ ವೆಲ್ 2 ವಿಕೆಟ್ ಪಡೆದರೆ, ರೀಶ್, ಯಶ್ ದಯಾಳ್, ಸಿರಾಜ್ ತಲಾ 1 ವಿಕೆಟ್ ಪಡೆದರು.
181 ಸ್ಕೋರ್ ಬೆನ್ನು ಹತ್ತಿದ ಆರ್ ಸಿಬಿ ಆಟಗಾರರು ಕ್ರಿಸ್ ನಲ್ಲಿ ನಿಂತು ಆಡಲು ಆಗದೆ ಪೆವಿಲಿಯನ್ ಪರೇಡ್ ನಡೆಸಿದರು. ಕೊಹ್ಲಿ 22, ನಾಯಕ ಡುಪ್ಲಿಸಿಸ್ 19, ಪಟಿದಾರ್ 29, ಮ್ಯಾಕ್ಸ್ ವೆಲ್ 0, ಗ್ರೀನ್ 9, ರಾವುತ್ 11, ಲೂಮರ್ 33, ಕಾರ್ತಿಕ್ 4, ಮಯಾಂಕ್ 0, ರೀಶ್ 3 ರನ್ ಗಳಿಸುವುದರೊಂದಿಗೆ 19.4 ಓವರ್ ಗಳಲ್ಲಿ 153 ರನ್ ಗಳಿಗೆ ಆಲೌಟ್ ಆಯಿತು. ಲಖನೌ ಆಟಗಾರ ಮಯಾಂಕ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.