ಔರಂಗಬಾದ್ ನಲ್ಲಿ ಬೆಂಕಿ ಅನಾಹುತ, 7 ಜನರ ಸಾವು

98

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾರಾಷ್ಟ್ರದ ಔರಂಗಬಾದ್ ನ ಛತ್ರಪತಿ ಸಂಭಾಜಿ ನಗರದಲ್ಲಿ ಬುಧವಾರ ಬೆಳಗಿನಜಾವ ಬೆಂಕಿ ಅನಾಹುತ ಸಂಭವಿಸಿದ್ದು, 7 ಜನರು ಮೃತಪಟ್ಟಿದ್ದಾರೆ.

ಬಟ್ಟೆ ಅಂಗಡಿಯಲ್ಲಿ ಈ ದುರಂತ ನಡೆದಿದೆ. ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿ 7 ಜನರು ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಬೆಳಗಿನಜಾವ ಸುಮಾರು 4 ಗಂಟೆಗೆ ಈ ಘಟನೆ ನಡೆದಿದೆ.

ಬೆಂಕಿ ದುರಂತದಲ್ಲಿ ಅಂಗಡಿಯಲ್ಲಿದ್ದವರು ಬಿಟ್ಟರೆ ಬೇರೆ ಯಾರಿಗೂ ತೊಂದರೆಯಾಗಿಲ್ಲ. ೀ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಂಭಾಜಿ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!