ಕುಡಿದ ನಶೆಯಲ್ಲಿ ಗಲಾಟೆ: ನಟ ರಕ್ಷಿತ್ ಸೇರಿ 7 ಜನರ ವಿರುದ್ಧ ಎಫ್ಐಆರ್

574

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡ ಸ್ಮಾಲ್ ಸ್ಕ್ರಿನ್ ನಟ ರಕ್ಷಿತ್ ಹಾಗೂ ಆತನ ಸ್ನೇಹಿತರು ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದಾಗಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕೆಂಗೇರಿಯಲ್ಲಿರುವಂತಹ ಜಿಂಜರ್ ಲೇಕ್ ವ್ಯೂವ್ ಹೋಟೆಲ್ ಗೆ ನಟ ರಕ್ಷಿತ್ ಹಾಗೂ ಸ್ನೇಹಿತರು ಹೋಗಿದ್ದಾರೆ. ಊಟದ ವಿಚಾರವಾಗಿ ಹೋಟೆಲ್ ಸಿಬ್ಬಂದಿ ಜೊತೆಗೆ ಜಗಳವಾಡಿದ್ದಾರೆ. ಹೀಗಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್ ಗೆ ಬಂದ ಪೊಲೀಸರೊಂದಿಗೆ ಗಲಾಟೆ ಮಾಡಿದ್ದಾರೆ.

ಹೊಯ್ಸಳ ಪೊಲೀಸರು ನಟ ರಕ್ಷಿತ್, ರಂಜನ್, ರವಿಚಂದ್ರನ್, ರಾಕೇಶ್, ಅಭಿಷೇಕ್, ಅನುಷಾ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಟ ರಕ್ಷಿತ್ ಈ ಹಿಂದೆಯೂ ಸಹ ಗಲಾಟೆ ಪ್ರಕರಣವೊಂದರಲ್ಲಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದ.




Leave a Reply

Your email address will not be published. Required fields are marked *

error: Content is protected !!