ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆ ದರೋಡೆ: ಐವರ ಬಂಧನ

224

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಐವರು, 3.5 ಲಕ್ಷ ರೂಪಾಯಿ ಹಾಗೂ 1 ಗನ್ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಆರೋಪಿಗಳು ನಕಲಿ ಐಡಿ ಜೊತೆಗೆ ಏರ್ ಪಿಸ್ತೂಲ್ ತಂದಿದ್ದರು.

ಉದ್ಯಮಿ ಮನೆ ಮೇಲೆ ದಾಳಿ ಮಾಡಿದಾಗ ಅಲ್ಲಿ ಇನ್ನೊಂದು ಪಿಸ್ತೂಲ್ ಸಿಕ್ಕಿತ್ತು. ಹಣದ ಹೊತೆಗೆ ಪಿಸ್ತೂಲ್ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಅನುಮಾನ ಬಂದು ಮನೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದ. ಜನವರಿ 23ರಂದು ಈ ಘಟನೆ ನಡೆದಿತ್ತು. ಇದೀಗ ಮಂಜುನಾಥ್, ದುರ್ಗೇಶ್, ಶೋಯಬ್, ಪ್ರಶಾಂತ್, ಕುಮಾರ್ ಅನ್ನೋ ಐವರನ್ನು ಬಂಧಿಸಿದ್ದಾರೆ.

ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದ ಆರೋಪಿಗಳು, ಉದ್ಯಮಿ ಬಗ್ಗೆ ತಿಳಿದುಕೊಂಡು ಐಟಿ ಸೋಗಿನಲ್ಲಿ ದಾಳಿ ಮಾಡಿದ್ದರು. ಇನ್ನು ಐವರಲ್ಲಿ ಮಂಜುನಾಥ್ ಎಂಬಾತ ಪತ್ರಿಕೆಯೊಂದರಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!