ಮುದ್ದೇಬಿಹಾಳ: ಭೀಕರ ರಸ್ತೆ ಅಪಘಾತದಲ್ಲಿ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿಯಲ್ಲಿ ನಡೆದಿದೆ. ಅಣ್ಣಕ್ಕ ಗುಲಾಲಸಿಂಗ್ ಹಜೇರಿ ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ.
ಬೆಳಗ್ಗೆ ಶೌಚಾಲಯಕ್ಕೆ ಹೋಗುವಾಗ ಯಮಸ್ವರೂಪಿ ಲಾರಿಯೊಂದು ಬಂದು ವೃದ್ಧೆ ಮೇಲೆ ಹಾಯ್ದಿದೆ. ಭೀಕರ ಅಪಘಾತದಲ್ಲಿ ವೃದ್ಧೆಯ ಕೈ, ಕಾಲುಗಳು ಸಂಪೂರ್ಣವಾಗಿ ಜಜ್ಜಿಹೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.