ಈ ಚಾಕೊಲೇಟ್ ಬೆಲೆಯಲ್ಲಿ ಒಂದು ಮನೆ ಕಟ್ಟಬಹುದು..

615

ನವದೆಹಲಿ: ಇದು ನಿಜಕ್ಕೂ ಅತ್ಯಂತ ದುಬಾರಿಯ ಚಾಕೊಲೇಟ್. ಅಲ್ದೇ, ವಿಶ್ವದ ಅತೀ ದುಬಾರಿ ಚಾಕೊಲೇಟ್ ಅನ್ನೋ ಪಾತ್ರಕ್ಕೂ ಇದು ಒಳಗಾಗಿದೆ. ಇಷ್ಟು ಮಾತ್ರವಲ್ಲ ಇದರ ಬೆಲೆಯಿಂದಾಗಿ ಗಿನ್ನಿಸ್ ರೆಕಾರ್ಡ್ ಸಹ ಮಾಡಿದೆ.

ಚಾಕೊಲೇಟ್, ಮಿಠಾಯಿ, ಕಾಫಿ ಉತ್ಪನ್ನಗಳ ಸಂಸ್ಥೆ ಐಟಿಸಿ ಇದನ್ನ ದೀಪಾವಳಿ ಪ್ರಯುಕ್ತ ಪರಿಚಯಿಸಿದೆ. ಇದು ಬರೀ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಲಭ್ಯವಿದೆ ಅಂತಾ ಐಟಿಸಿ ಆಹಾರ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಅನುಜ ರುಸ್ತಗಿ ಹೇಳಿದ್ದಾರೆ. ಅಂದ್ಹಾಗೆ ಈ ಚಾಕೊಲೇಟ್ ಬೆಲೆ ಬರೋಬ್ಬರಿ 4.3 ಲಕ್ಷ ರೂಪಾಯಿ. ತಲೆ ಒಂದು ಕ್ಷಣ ಗಿರ್ ಅಂದಿರ್ಬೇಕಲ್ವಾ..

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣ ಪತ್ರ

ಯೆಸ್, ಫೇಬಲ್ ಬ್ರ್ಯಾಂಡ್ ನೊಂದಿಗೆ ಪರಿಚಯಿಸಿರುವ ಚಾಕೊಲೇಟ್ ಪ್ರತಿ ಕೆಜಿಗೆ 4.3 ಲಕ್ಷ ರೂಪಾಯಿ. ಈ ಬಗ್ಗೆ ಮಾತ್ನಾಡಿರುವ ಅನುಜ ರುಸ್ತಗಿ, ಚಾಕೊಲೇಟ್ ಉದ್ಯಮ ಹೆಚ್ಚು ಲಾಭದಾಯಕವಾಗಿದೆ. ಫೇಬಲ್ ನ ಹೊಸ ಚಾಕೊಲೇಟ್ ಗಾಗಿ ಪ್ರತ್ಯೇಕ ಆದೇಶ ಮಾಡಬೇಕಾಗಿದೆ. ದೀಪಾವಳಿ ವೇಳೆಯಲ್ಲಿ ಮೊದಲು ಶುರು ಮಾಡಲಾಗಿದೆ ಅಂತಾ ಹೇಳಿದ್ದಾರೆ.

ಜಾಹೀರಾತು

ಚಾಕೊಲೇಟ್ ಬಾಕ್ಸ್ ಬೆಲೆ 1 ಲಕ್ಷ

ಒಂದು ಕೆಜಿ ಚಾಕೊಲೇಟ್ ಗೆ 4.3 ಲಕ್ಷ ರೂಪಾಯಿಯಾದ್ರೆ, ಇದರ ಬಾಕ್ಸ್ ಬೆಲೆ ಸಹ ದುಬಾರಿ. ಇದರ ರೇಟ್ 1 ಲಕ್ಷ ರೂಪಾಯಿ. ಮರದಿಂದ ಮಾಡಿದ ಪೆಟ್ಟಿಗೆಯಲ್ಲಿ 15 ಗ್ರಾಂನ 15 ಟ್ರಫಲ್ಸ್ ಇರುತ್ತವೆ. ಎಲ್ಲ ಟ್ಯಾಕ್ಸ್ ಸೇರಿ ಇದರ ಬೆಲೆ 1 ಲಕ್ಷ ರೂಪಾಯಿಗಿದೆ ಎಂದು ಐಟಿಸಿ ಸಂಸ್ಥೆ ತಿಳಿಸಿದೆ.

1 ಲಕ್ಷ ಬೆಲೆಯ ಬಾಕ್ಸ್
ಜಾಹೀರಾತು

ಇನ್ನು 2012ರಲ್ಲಿಯೇ ಐಟಿಸಿ ದುಬಾರಿ ಚಾಕೊಲೇಟ್ ಬಿಡುಗಡೆ ಮಾಡಿತ್ತು. ಡೆನ್ಮಾರ್ಕ್ ನ ಚಾಕೊಲೇಟರ್ ಫಿಟ್ಜ್ ನಿಪ್ಸ್ ಚೈಲ್ಡ್ ಡೆನ್ಮಾರ್ಕ್ ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಆಗಿತ್ತು. ಇದರ ಬೆಲೆ 3.39 ಲಕ್ಷ ಆಗಿತ್ತು ಅನ್ನೋ ವರದಿಯಾಗಿದೆ. ಇಷ್ಟೊಂದು ಹಣಕ್ಕೆ ಬಡವರು ಪುಟ್ಟದಾದ ಮನೆಯೊಂದು ಕಟ್ಟಿಕೊಂಡು ಜೀವನ ಮಾಡಬಹುದು.




Leave a Reply

Your email address will not be published. Required fields are marked *

error: Content is protected !!