ಹರಿಯಾಣದಲ್ಲಿ ಸರ್ಕಾರ ರಚನೆಗೆ ‘ಕೈ’ಚಾಚಿದ ನಾಯಕರು!

349

ಚಂಡಿಗಢ: ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಭರ್ಜರಿಯಾಗಿ ನಡೆದಿದೆ. ಇನ್ನು ಕೆಲ ಗಂಟೆಗಳಲ್ಲಿ ಸ್ಪಷ್ಟ ಫಲಿತಾಂಶ ಸಿಗಲಿದೆ. ಇದರ ನಡುವೆ ಬಿಜೆಪಿಗೆ ಕಾಂಗ್ರೆಸ್ ಬಿಗ್ ಶಾಕ್ ಕೊಡಲು ಹೊರಟಿದೆ. ಹಾವು ಏಣಿ ಆಟದಂತೆ ಮುನ್ನಡೆ ಬರ್ತಿದೆ.

ಆರಂಭಿಕವಾಗಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿ ಇದೀಗ 38 ಕ್ಷೇತ್ರಗಳಿಗೆ ಬಂದಿದೆ. ಕಾಂಗ್ರೆಸ್ 33, ಐಎನ್ಎಲ್ ಡಿ 2 ಹಾಗೂ ಪಕ್ಷೇತರರು 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಲಿದೆ ಎಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.

ಸರ್ಕಾರ ರಚನೆ ಮಾಡಲು 46 ಮ್ಯಾಜಿಕ್ ನಂಬರ್ ಆಗಿದೆ. ಆದ್ರೆ, ಸದ್ಯದ ಪರಿಸ್ಥಿತಿಯಲ್ಲಿ ಈ ನಂಬರ್ ಯಾರು ದಾಟುತ್ತಾರೆ ಅನ್ನೋ ಕುತೂಹಲವಿದೆ. ಆಡಳಿತರೂಢ ಬಿಜೆಪಿಗೆ ಹಿನ್ನಡೆಯಾದ್ರೆ, ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆಯಿದೆ. ಇನ್ನು ಬಿಜೆಪಿಯಿಂದ ದಾದ್ರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕುಸ್ತಿ ಪಟು ಬಬಿತಾ ಪೊಗೆಟ್ ಮುನ್ನಡೆ ಸಾಧಿಸಿದ್ದಾರೆ.

ಗ್ರಾಫಿಕ್ಸ್ ಮತ್ತು ಫೋಟೋ: ಎಎನ್ಐ ಟ್ವೀಟರ್ ನ್ಯೂಸ್




Leave a Reply

Your email address will not be published. Required fields are marked *

error: Content is protected !!