ನಮೋ-ಶಾ ಜೋಡಿಗೆ ಒಲಿಯದ ಹರಿಯಾಣ: ಮೊದಲ ವಿಕೆಟ್ ಪತನ

438

ಚಂದಿಗಢ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಬರದ ಹಿನ್ನೆಲೆಯಲ್ಲಿ ಮೊದಲ ವಿಕೆಟ್ ಪತನವಾಗಿದೆ. ಬಿಜೆಪಿ 39 ಸ್ಥಾನಗಳಲ್ಲಿ ಲೀಡಿಂಗ್ ಇದೆ. ಕಾಂಗ್ರೆಸ್ 33 ರಲ್ಲಿದೆ. ಪಕ್ಷೇತರರು 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದರ ನಡುವೆ ಬಿಜೆಪಿಯ ಮೊದಲ ವಿಕೆಟ್ ಪತನವಾಗಿದೆ.

ಹರಿಯಾಣದ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಹಿನ್ನಡೆ ಜೊತೆಗೆ ತೋಹಾನ್ ಕ್ಷೇತ್ರದಲ್ಲಿ ಸ್ವತಃ ಅವರು ಹಿನ್ನಡೆ ಅನುಭವಿಸಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರ ಜೊತೆ ಐವರು ಸಚಿವರು ಸಹ ಸೋಲಿನ ಭೀತಿಯಲ್ಲಿದ್ದಾರೆ. ಅಧಿಕಾರದಲ್ಲಿದ್ದ ಬಿಜೆಪಿ ಹಿನ್ನಡೆ ಅನುಭವಿಸಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ ಶಾ ಜೋಡಿಗೆ ಸೋಲಿನ ಹಣೆಬರಹ ಬದಲಾಯಿಸಲು ಆಗ್ಲಿಲ್ಲ.




Leave a Reply

Your email address will not be published. Required fields are marked *

error: Content is protected !!