ಎಬಿಸಿಡಿ ಡ್ಯಾನ್ಸ್ ಬ್ಯೂಟಿ ಏನಾದ್ಳು?

1717

2013ರಲ್ಲಿ ತೆರೆಗೆ ಬಂದ ಎನಿಬಡಿ ಕೆನ್ ಡ್ಯಾನ್ಸ್ ಅನ್ನೋ ಚಿತ್ರ ಬಾಲಿವುಡ್ ಅಂಗಳದಲ್ಲಿ ಬಹುದೊಡ್ಡ ಸಕ್ಸಸ್ ಕಂಡಿತು. ಇದರಲ್ಲಿನ ಡ್ಯಾನ್ಸ್ ನೋಡುಗರನ್ನ ಹುಚ್ಚೆದ್ದು ಕಣಿಯುವಂತೆ ಮಾಡಿತು. ಡ್ಯಾನ್ಸ್ ಟೀಂನಲ್ಲಿ ಮಿಂಚಿದ ಬ್ಯೂಟಿ ಲಾರೆನ್ ಗಾಟ್ಲೀಬ್.

ಅಮೆರಿಕ ಮೂಲದ ಡ್ಯಾನ್ಸರ್ ಲಾರೆನ್ ಗೆ ಬಹುದೊಡ್ಡ ಸಕ್ಸಸ್ ತಂದು ಕೊಟ್ಟಿತು. ಬಳಿಕ ನಟಿ ಲಾರೆನ್ ಇಂಡಿಯಾದಲ್ಲಿ ಮನೆ ಮಾಡುವ ಪ್ಲಾನ್ ಮಾಡಿದ್ಳು. ನೇಮ್ ಫೇಮ್ ಬಂದ ನಟಿ ಡ್ರಗ್ಸ್ ವ್ಯಸನಿಯಾಗಿದ್ಳಂತೆ. ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ನಟಿ ಅದ್ರಿಂದ ಹೊರ ಬರಲು ಸಾಕಷ್ಟು ಹೈರಾಣಗಿದ್ಳಂತೆ.

ಅಲ್ದೇ, ನಟಿ ಲಾರೆನ್ ಗಾಟ್ಲೀಬ್ ಗೆ ಎಬಿಸಿಡಿ ಚಿತ್ರ ತಂಡದಿದಲೂ ನೋವಾಗಿದೆ ಅಂತಾ ಹೇಳಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ನಗುಮುಖದ ಫೋಟೋ ಹಾಕ್ತಿದ್ದೆ. ಅದರ ಹಿಂದೆ ಸಾಕಷ್ಟು ನೋವು ಇತ್ತು. ಪ್ರಚಾರಕ್ಕೆ ಕರೆದಿಲ್ಲ. ನನ್ನ ಭಾಗದ ವಿಡಿಯೋ ಡಿಲಿಟ್ ಮಾಡಿದ್ರು ಅಂತಾ ಹೇಳಿದ್ದಾಳೆ. ಇದೀಗ ಮತ್ತೆ ಬಿಟೌನ್ ಅಂಗಳದಲ್ಲಿ ಕಾಣಿಸಿಕೊಳ್ಳುವ ಯತ್ನದಲ್ಲಿದ್ದಾಳೆ.

ನಟ, ನಿರ್ದೇಶಕ ಪ್ರಭುದೇವ, ರೆಮೋ ಡಿಸೋಜಾ ಹಾಗೂ ಗಣೇಶ ಆಚಾರ್ಯ ಅವರು ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ರು. ಇವರೆಲ್ಲ ಖ್ಯಾತ ಕೋರಿಯೋಗ್ರಾಫರ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!