ನಟಿ ಭಾರತಿ ಹಾಗೂ ಪತಿ ಹರ್ಷಾಗೆ ಜಾಮೀನು

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡ್ರಗ್ಸ್ ಕೇಸ್ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ಹಾಸ್ಯ ನಟಿ ಹಾಗೂ ನಿರೂಪಕಿ ಭಾರತಿ ಸಿಂಗ್ ಹಾಗೂ ಆಕೆಯ ಪತಿ ಹರ್ಷಾ ಲಿಂಬಾಚಿಯಾಗೆ ಜಾಮೀನು ನೀಡಲಾಗಿದೆ. ಮುಂಬೈ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ಎನ್ ಸಿಬಿ ಅಧಿಕಾರಿಗಳು ಇವರ ಮನೆ ಮೇಲೆ ದಾಳಿ ನಡೆಸಿದಾಗ 86.5 ಗ್ರಾಂನಷ್ಟು ಮಾದಕ ದ್ರವ್ಯ ಪತ್ತೆಯಾಗಿತ್ತು. ಬಳಿಕ ಕಳೆದ ಶನಿವಾರ ಭಾರತಿ ಸಿಂಗ್, ಭಾನುವಾರ ಹರ್ಷಾ ಬಂಧನವಾಗಿತ್ತು. ಹರ್ಷಾ ಗಾಂಜಾ ಸೇವನೆ ಮಾಡ್ತಿರುವುದು ಒಪ್ಪಿಕೊಂಡಿದ್ದಾರೆ.

ಎನ್ ಸಿಬಿ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಸಿಕ್ಕಿರುವುದ್ರಿಂದ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿರ್ಲಿಲ್ಲ. ಹೀಗಾಗಿ 15 ಸಾವಿರ ರೂಪಾಯಿ ಬಾಂಡ್ ಬರೆಸಿಕೊಂಡಿರುವ ಮುಂಬೈ ಮೆಟ್ರೋಪಾಲಿಟಿಯನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.




Leave a Reply

Your email address will not be published. Required fields are marked *

error: Content is protected !!