ಶೂಟಿಂಗ್ ನಲ್ಲಿ ತುಂಬು ಗರ್ಭಿಣಿ ಅನುಷ್ಕಾ

270

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬು ಗರ್ಭಿಣಿ ನಟಿ ಅನುಷ್ಕಾ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ. ಈ ಸಂದರ್ಭದಲ್ಲಿ ಸಹಜವಾಗಿ ಹೆಣ್ಮಕ್ಕಳು ವಿಶ್ರಾಂತಿ ಪಡೆಯುತ್ತಾರೆ. ಆದ್ರೆ, 8 ತಿಂಗಳು ಗರ್ಭಿಣಿ ನಟಿ ಅನುಷ್ಕಾ ಶೂಟಿಂಗ್ ಗೆ ಬಂದಿರುವುದು ಕೆಲಸದ ಮೇಲಿನ ಪ್ರೀತಿ ತೋರಿಸ್ತಿದೆ.

ಅನುಷ್ಕಾ ಶೂಟಿಂಗ್ ನಲ್ಲಿ ಕಾಣಿಸಿಕೊಂಡಿದ್ರೂ ಅದು ಸಿನಿಮಾದ ಚಿತ್ರೀಕರಣವಲ್ಲ. ಅವರು ಕಾಣಿಸಿಕೊಂಡಿರುವುದು ಜಾಹೀರಾತು ಚಿತ್ರೀಕರಣದಲ್ಲಿ. ಅದು ಇದು ಬರೀ ಒಂದು ಜಾಹೀರಾತು ಅಲ್ಲ. ಬರೋಬ್ಬರಿ 7 ಜಾಹೀರಾತುಗಳಲ್ಲಿ ಅನುಷ್ಕಾ ಕಾಣಿಸಿಕೊಳ್ತಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಪತಿಯ ಜೊತೆಗೆ ದುಬೈಗೆ ತೆರಳಿದ್ದ ಅನುಷ್ಕಾ ವಾಪಸ್ ಆಗಿದ್ದು, ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಪತಿ ವಿರಾಟ ಕೊಹ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು, ಪತ್ನಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಶೂಟಿಂಗ್ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!