ಕಾಲೇಜು ಶುರುವಿನಲ್ಲೇ ಗುಮ್ಮಟನಗರಿಯಲ್ಲಿ 33 ಜನರಿಗೆ ಕೋವಿಡ್

256

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕೋವಿಡ್ 19 ಕಾರಣದಿಂದ ಬಂದ್ ಆಗಿದ್ದ ಕಾಲೇಜುಗಳು 9 ತಿಂಗಳ ಬಳಿಕ ಪ್ರಾರಂಭವಾಗಿವೆ. ಹೀಗಾಗಿ ಪದವಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಕಾಲೇಜಿನತ್ತ ಮುಖ ಮಾಡ್ತಿರುವ ಹೊತ್ತಿನಲ್ಲೇ ಆತಂಕ ಶುರುವಾಗಿದೆ.

ಜಿಲ್ಲೆಯಲ್ಲಿ 23 ಜನ ಪ್ರಾಧ್ಯಾಪಕರಿಗೆ, 10 ಜನ ವಿದ್ಯಾರ್ಥಿಗಳಿಗೆ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದ್ರಿಂದಾಗಿ ರಾಜ್ಯ ಸರ್ಕಾರಕ್ಕೆ ಮತ್ತೊಂದು ಟೆನ್ಷನ್ ಶುರುವಾಗುವ ಲಕ್ಷಣಗಳು ಕಾಣ್ತಿವೆ.

ಕೋವಿಡ್ ನಿಯಮದಂತೆ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಕರೋನಾ ನೆಗೆಟಿವ್ ಪ್ರಮಾಣ ಪತ್ರ ಕಡ್ಡಾಯವಾಗಿ ತರಬೇಕು ಎಂದು ಆದೇಶಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯ 373 ಪ್ರಾಧ್ಯಾಪಕರು ಹಾಗೂ 3,541 ವಿದ್ಯಾರ್ಥಿಗಳ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ 23 ಪ್ರಾಧ್ಯಾಪಕರು ಮತ್ತು 10 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಮಾಹಿತಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!