ಪುರಸಭೆ ಮುಖ್ಯಾಧಿಕಾರಿಗೆ ಡಿಸಿ ‘ಛೀ’ಮಾರಿ

431

ಸಿಂದಗಿ: ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಇಂದು ಸಿಂದಗಿಗೆ ಸರ್ಪ್ರೈಸ್ ಭೇಟಿ ನೀಡಿದ್ರು. ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ರು. ಈ ವೇಳೆ ತಹಶೀಲ್ದಾರ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ರು.

ಕ್ರಿಮಿನಲ್ ಕೇಸ್

ನಗರದಲ್ಲಿ ಮೂಲಭೂತ ಸೌಕರ್ಯಗಳನ್ನ ಪುರಸಭೆ ಸರಿಯಾಗಿ ನಿಭಾಯಿಸ್ತಿಲ್ಲ ಅನ್ನೋ ಮಾಧ್ಯಮಪ್ರತಿನಿಧಿಗಳ ಪ್ರಶ್ನೆಗೆ, ಉತ್ತರಿಸಲು ತಡಬಡಾಯಿಸಿದ ಮುಖ್ಯಾಧಿಕಾರಿ ಸಯೀದ್ ಅಹ್ಮದ್ ವಿರುದ್ಧ ಗರಂ ಆದ ಡಿಸಿ, ಅವರು ಕೇಳಿದ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಿ ಅಂತಾ ಹೇಳಿದ್ರು. ನೀರು, ಗಟಾರು ಸಮಸ್ಯೆ, ಕಸದ ವಿಚಾರ, ಜನರ ಕೈಗೆ ಯಾವುದೇ ಸಿಬ್ಬಂದಿ ಸರಿಯಾಗಿ ಸಿಗದೆ ಇರುವ ವಿಚಾರಕ್ಕೆ ಮುಖ್ಯಾಧಿಕಾರಿಯನ್ನ ಡಿಸಿ ತರಾಟೆಗೆ ತೆಗೆದುಕೊಂಡ್ರು.

ಶೌಚಾಲಯದ ವಿಚಾರದ ಬಗ್ಗೆ ಡಿಸಿಗೆ ಮಾಹಿತಿ

ಖಾತೆ ವರ್ಗಾವಣೆ, ಉತಾರಿ ಸೇರಿ ಹತ್ತಾರು ಕಾರ್ಯಗಳಲ್ಲಿ ಸಹಿ ಸಹ ಯಾರ್ಯಾರೋ ಮಾಡ್ತಿದ್ದಾರೆ ಅಂತಾ ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಅಂತವರ ವಿರುದ್ಧ ಕ್ರಮಿನಲ್ ಕೇಸ್ ದಾಖಲಿಸಲಾಗುತ್ತೆ ಅಂತಾ ಡಿಸಿ ಹೇಳಿದ್ರು.

ಜಲ ಶುದ್ಧೀಕರಣ ಘಟಕದ ಸಮಸ್ಯೆಗೆ 15 ದಿನ ಡೆಡ್ ಲೈನ್

ಜಲಶುದ್ಧೀಕರಣ ಘಟಕಕ್ಕೆ ಫ್ಯೂರಿನೇಷನ್ ಅಳವಡಿಸದೆ ಇರುವ ಬಗ್ಗೆ ಪ್ರಶ್ನಿಸಲಾಯ್ತು. ಈ ಬಗ್ಗೆ 8 ದಿನಗಳಲ್ಲಿ ಕೆಲಸ ಮಾಡ್ತೀನಿ ಅಂತಾ ಪುರಸಭೆ ಮುಖ್ಯಾಧಿಕಾರಿ ಹೇಳಿದ್ರು. 3 ವರ್ಷದಿಂದ ಆಗದಿರೋ ಕೆಲಸ 8 ದಿನಗಳಲ್ಲಿ ಹೇಗೆ ಮಾಡ್ತೀರಿ. 15 ದಿನದಲ್ಲಿ ಕಂಪ್ಲೀಟ್ ಮಾಡಬೇಕು ಅಂತಾ ಡಿಸಿ ಸೂಚನೆ ನೀಡಿದ್ರು.

ಪತ್ರಕರ್ತರ ಜೊತೆ ಹೇಗೆ ಮಾತ್ನಾಡಬೇಕೆಂದು ಮುಖ್ಯಾಧಿಕಾರಿಗೆ ಡಿಸಿ ತಿಳಿಸಿದ್ರು

ಪಟ್ಟಣದಲ್ಲಿ 38 ಡೆಂಗ್ಯೂ ಪ್ರಕರಣ

ನಗರದಲ್ಲಿ ಸ್ಚಚ್ಛತೆ ಅನ್ನೋದು ಮಾಯವಾಗಿದೆ. ಇದ್ರಿಂದ ಪಟ್ಟಣದಲ್ಲಿ 38 ಡೆಂಗ್ಯೂ ಪ್ರಕರಣ ದಾಖಲೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಮಾಧ್ಯಮದಲ್ಲಿ ಸುದ್ದಿಯಾಗುತ್ತೆ. ಅಲ್ದೇ ಕೇಂದ್ರ ಪೋಸ್ಟ್ ಆಫೀಸ್ ಮುಂದಿನ ಶೌಚಾಲಕ್ಕೆ ಸಂಬಂಧಿಸಿದಂತೆ ನಾಳೆ ಬೆಳ್ಳಂಬೆಳಗ್ಗೆ ಸ್ಥಳಕ್ಕೆ ತಹಶೀಲ್ದಾರ್ ಜೊತೆ ಭೇಟಿ ನೀಡಿ ಅಂತಾ ಹೇಳಿದ್ರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಸುಮ್ಮನೆ ಕುಳಿತ ಮುಖ್ಯಾಧಿಕಾರಿ

ಕಲಹಳ್ಳಿ ಕ್ಯಾನಲ್ ಸಮಸ್ಯೆಗೆ 15 ದಿನದಲ್ಲಿ ಪರಿಹಾರ

ಕಲಹಳ್ಳಿ ಬಳಿಯ ಐವಿಸಿ ಕ್ಯಾನಲ್ ಒಡೆದ ಪರಿಣಾಮ ಉಂಟಾದ ಬೆಳೆ ಹಾನಿ ಬಗ್ಗೆ ಮೊದ್ಲು ಡ್ರೋನ್ ಸರ್ವೇ ಮಾಡಲಾಗುತ್ತೆ. ಎಂಡಿಕೆಬಿಜಿಎನ್ಎಲ್, ಕೃಷ್ಣ ಜಲ ನಿಗಮದೊಂದಿಗೆ ಪರಿಶೀಲನೆ ಕಾರ್ಯ ನಡೆಯುತ್ತೆ. 30 ಲಕ್ಷ ಎಂಬ್ಯಾಕ್ ಮೆಂಟ್ ಇದ್ದು, 15 ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಅಂತಾ ತಿಳಿಸಿದ್ರು.

ಮೂವರು ಸಸ್ಪೆಂಡ್

ದೇವರಹಿಪ್ಪರಗಿಯ ಗ್ರಾಮ ಲೆಕ್ಕಾಧಿಕಾರಿ ಅರಿಕೇರಿ, ಸಿಂದಗಿಯ ತಹಶೀಲ್ದಾರ ಕಚೇರಿಯ ಎಫ್ ಡಿಎ ಎಸ್.ಸಿ ಲೋಣಿಕರ ಹಾಗೂ ಆರ್.ಪಿ ಜೋಶಿ ಅವರನ್ನ ಅನಧಿಕೃತ ರಜೆದ ಮೇಲೆ ಅಮಾನತು ಮಾಡಲಾಯ್ತು.

ಮಿನಿ ವಿಧೌನಸೌಧ

ದೇವರಹಿಪ್ಪರಗಿಯಲ್ಲಿ ಮೂರು ಕಡೆ ಜಾಗ ಪರಿಶೀಲನೆ ಮಾಡಿದ್ದು ಸ್ಥಳೀಯ ಶಾಸಕರು ಸೂಚಿಸಿದ ಜಾಗವನ್ನ, ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಅಂತಾ ತಿಳಿಸಿದ್ರು. ಸಿಂದಗಿಯಲ್ಲಿ ಮಿನಿ ವಿಧಾನಸೌಧ ವಿಚಾರ ತಕರಾರಿನಲ್ಲಿದ್ದು ಈ ಬಗ್ಗೆ ನಾನು ಮಾತ್ನಾಡುವುದಿಲ್ಲ ಅಂತಾ ಹೇಳಿದ್ರು. ಈ ವೇಳೆ ತಹಶೀಲ್ದಾರ್ ಕಡಕಬಾವಿ, ಡಿಯುಡಿಸಿ ವಿರೇಶಕುಮಾರ ಜಿ.ಟಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಯೀದ್ ಮಹ್ಮದ್ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!