ಪ್ರಜಾಸ್ತ್ರ ಸರಣಿ ಸ್ಟೋರಿ: ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

680

ಸಿಂದಗಿ: ಪಟ್ಟಣದ ವಿದ್ಯಾನಗರ ಮೂರನೇ ಕ್ರಾಸ್ ನಲ್ಲಿರುವ ಉದ್ಯಾನವನದ ಬೋರ್ಡ್ ಬದಲಾಗಿರುವ ಬಗ್ಗೆ ‘ಪ್ರಜಾಸ್ತ್ರ’ ವರದಿ ಮಾಡಿತ್ತು. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮಾಹಿತಿ ಕೊಡದೆ ನುಣಿಚಿಕೊಳ್ಳುವ ಕೆಲಸ ಮಾಡ್ತಿದ್ರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಇಂದು ಸಿಂದಗಿಗೆ ಭೇಟಿ ನೀಡಿದ ವೇಳೆ ಅವರ ಗಮನಕ್ಕೆ ಈ ವಿಚಾರ ತರಲಾಯ್ತು. ಈ ಬಗ್ಗೆ ದಾಖಲೆಗಳನ್ನ ಪರಿಶೀಲನೆ ಮಾಡಿ, ಉದ್ಯಾನವನದ ಹೆಸರು ಈ ಹಿಂದೆ ಯಾರದಿತ್ತು. ಎಲ್ಲಿ ಏನಾಗಿದೆ ಅನ್ನೋದರ ಮಾಹಿತಿ ನೀಡಬೇಕೆಂದು ಪುರಸಭೆ ಮುಖ್ಯಾಧೀಕಾರಿ ಸಯೀದ ಅಹ್ಮದ ಅವರಿಗೆ ಸೂಚನೆ ನೀಡಿದ್ರು.

ಅಲ್ದೇ, ಮಾಧ್ಯಮಪ್ರತಿನಿಧಿಗಳು ಕೇಳುವ ವಿಚಾರಗಳಿಗೆ ಸರಿಯಾಗಿ ಸ್ಪಂದಿಸಬೇಕು. ಹಿಂದಿನ ಅಧಿಕಾರಿ ಕಾಲದಲ್ಲಿ ಆಗಿದೆ. ನನ್ಗೆ ಗೊತ್ತಿಲ್ಲ ಅನ್ನೋ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಅಂತಾ ತಿಳಿಸಿದ್ರು.

ತಾಲೂಕಾಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ

ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ವಾರ್ಡ್ ಪರಿಶೀಲನೆ

‘ಪ್ರಜಾಸ್ತ್ರ’ದಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯ ಸಮಸ್ಯೆ ಬಗ್ಗೆ ಸರಣಿ ಸ್ಟೋರಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು, ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ರು. ಈ ವೇಳೆ ಆಸ್ಪತ್ರೆಯಲ್ಲಿ ರೋಗಿಗಳು ಇಲ್ಲದೆ ಬಣಗುಡ್ತಿದ್ದ ಆಸ್ಪತ್ರೆ ನೋಡಿ ಶಾಕ್ ಆದ್ರು. ಬಳಿಕ ಆಸ್ಪತ್ರೆಯ ಪ್ರತಿಯೊಂದು ವಿಭಾಗದ ಮಾಹಿತಿ ಪಡೆದ್ರು.

ಪ್ರಜಾಸ್ತ್ರ ಸರಣಿ ಸ್ಟೋರಿ ಚಿತ್ರಣ

‘ಪ್ರಜಾಸ್ತ್ರ’ದಲ್ಲಿ ಬಂದ ರೋಗಿಗಳ ವಾರ್ಡ್ ಸಮಸ್ಯೆ, ಶೌಚಾಲಯ ಸಮಸ್ಯೆ, ನೀರಿನ ಸಮಸ್ಯೆ, ಅಡುಗೆ ಮನೆಯ ವಿಚಾರ, ಆಸ್ಪತ್ರೆ ಆವರಣದಲ್ಲಿ ಹಂದಿಗಳ ಹಾವಳಿ ಸೇರಿದಂತೆ ಪ್ರತಿಯೊಂದರ ಬಗ್ಗೆ ಮುಖ್ಯ ವೈದ್ಯಾಧಿಕಾರಿ ಸುರೇಖಾ ಹಡಗಲಿ ಅವರಿಗೆ ಸೂಚನೆ ನೀಡಿದ್ರು. ಅಲ್ದೇ, ಈ ಬಗ್ಗೆ ಡಿಎಚ್ಓ ಅವರು ನಾಳೆ ಬಂದು ಪರಿಶೀಲನೆ ಮಾಡಲು ಹೇಳಿದ್ರು.

ಆಸ್ಪತ್ರೆ ಆವರಣದ ಬೋರ್ ವೆಲ್ ಪರಿಶೀಲಿಸಿದ ಡಿಸಿ

ನಾನು ಇನ್ನೊಂದು ತಿಂಗಳಲ್ಲಿ ಬಂದು ಭೇಟಿ ನೀಡುವ ಟೈಂನಲ್ಲಿ ಎಲ್ಲ ಸಮಸ್ಯೆಗಳು ಮುಗಿದರಬೇಕು. ನಿಮ್ಮ ಕಾರ್ಯಗಳಿಗೆ ಪುರಸಭೆಯಿಂದ ಏನು ಕೆಲಸಗಳು ಆಗಬೇಕು ಅದನ್ನ ತುರ್ತಾಗಿ ಮಾಡಿ ಅಂತಾ ಹೇಳಿದ್ರು. ಇನ್ನು ಪ್ರಜಾಸ್ತ್ರದಲ್ಲಿ ಸರಣಿ ವರದಿಯಿಂದ ಎಚ್ಚೆತ್ತುಕೊಂಡಿರುವ ಮುಖ್ಯ ವೈದ್ಯಾಧಿಕಾರಿ ಕೆಲಸಗಳ ಕಾಮಗಾರಿ ನಡೆಸಿದ್ದಾರೆ.

ಅಡುಗೆ ವಿಭಾಗ ಪರಿಶೀಲನೆ
ಅಡುಗೆ ವಿಭಾಗ



Leave a Reply

Your email address will not be published. Required fields are marked *

error: Content is protected !!