ದೇಶದಲ್ಲಿ ಸ್ವಲ್ಪ ಇಳಿಕೆ ಕಂಡ ಕೋವಿಡ್ ಸೋಂಕು

271

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 69,921 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇದ್ರಿಂದಾಗಿ 36,91,167ಕ್ಕೆ ಏರಿಕೆಯಾಗಿದೆ. ಈ ಹಿಂದಿನ ದಾಖಲೆ ನೋಡಿದ್ರೆ ಇದು ಸ್ವಲ್ಪ ಇಳಿಕೆ ಕಂಡಿದ್ದು, ಸಾರ್ವಜನಿಕರಲ್ಲಿ ಒಂದಿಷ್ಟು ನೆಮ್ಮದಿ ತಂದಿದೆ.

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 819 ಜನರು ದೇಶದಲ್ಲಿ ಸಾವನ್ನಪ್ಪಿದ್ದು, 65,288ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನದಲ್ಲಿ 64,442 ಜನರು ಡಿಸ್ಚಾರ್ಜ್ ಆಗುವುದರೊಂದಿಗೆ 28,39,883 ಜನರು ಗುಣಮುಖರಾಗಿದ್ದಾರೆ. 7,85,996 ಜನರು ದೇಶದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!