ಕನ್ನಡಕ್ಕೆ ಚಿಯಾನ್ ವಿಕ್ರಂ!

251

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಸಿನಿ ದುನಿಯಾದ ಸ್ಟಾರ್ ನಟ ಚಿಯಾನ್ ವಿಕ್ರಂ, ಕನ್ನಡಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳಿವೆ. ಸ್ವತಃ ಅವರೆ ಈ ಬಗ್ಗೆ ಹೇಳಿದ್ದಾರೆ. ಯೆಸ್, ಅವರ ಕೋಬ್ರಾ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ಅದರ ಪ್ರಚಾರದ ಹೊತ್ತಿನಲ್ಲಿ ಚಿಯಾನ್ ಕನ್ನಡದಲ್ಲಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ನಿರ್ದೇಶಕ ಪವನ್ ಕುಮಾರ್ ಹೇಳಿದ ಕಥೆ ಇಷ್ಟವಾಗಿದೆ. ಅವರ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಲೂಸಿಯಾ, ಯೂ ಟರ್ನ್ ಚಿತ್ರದ ಮೂಲಕ ಸಾಕಷ್ಟು ಭರವಸೆ ಮೂಡಿಸಿದ ನಿರ್ದೇಶಕ ಪವನ್ ಕುಮಾರ್, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಅಡಿಯಲ್ಲಿ ಫಹಾದ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನೋ ಸುದ್ದಿಯಿದೆ. ಈಗ ನಟ ವಿಕ್ರಂ ಜೊತೆ ಸಿನಿಮಾ ಎಂದಾಗ, ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆಗೆ ಮಾಡಬೇಕಿದ್ದ ದ್ವಿತ್ವ ಅನ್ನೋ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!