ಪ್ರಜಾಸ್ತ್ರ ಸುದ್ದಿ
ಧಾರವಾಡ: ಸಿದ್ದರಾಮಯ್ಯಗೆ ಆರ್ ಎಸ್ಎಸ್ ಬಗ್ಗೆ ಏನು ಗೊತ್ತು? ದೇಶದ ಜನತೆಗೆ ಗೊತ್ತಿದೆ ಬಿಜೆಪಿ, ಆರ್ ಎಸ್ಎಸ್ ಬಗ್ಗೆ. ಈ ಬಗ್ಗೆ ಸಿದ್ದರಾಮಯ್ಯ ಹೇಳಬೇಕಿಲ್ಲ. ಕಾಂಗ್ರೆಸ್ ನವರಿಗೆ ಐಎಸ್ಐ ಏಜೆಂಟ್ ಅಂದರೆ ಏನು ಮಾಡುತ್ತಾರೆ ಎಂದು ಕೇಂದ್ರ ಸಚಿವ ಪಹ್ಲಾದ್ ಜೋಶಿ ಕಿಡಿ ಕಾರಿದರು.
ಸಿದ್ದರಾಮಯ್ಯ ಗೌರವಾನ್ವಿತ ನಾಯಕ. ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ, ಮಾತನಾಡುವಾಗ ಇತಿಮಿತಿ ಇರಬೇಕು. ಮುಸ್ಲಿಂ ತುಷ್ಟೀಕರಣಕ್ಕಾಗಿ ಸಿದ್ದರಾಮಯ್ಯ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.