ಸುದೀಪಗೆ ಕೋವಿಡ್ ಪಾಸಿಟಿವ್ ಇಲ್ಲ: ಜಾಕ್ ಮಂಜು

246

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕಿಚ್ಚ ಸುದೀಪ್ ಅವರ ಅಪ್ ಕಮಿಂಗ್ ಮೂವಿ ರಣವಿಕ್ರಂ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ದೆಹಲಿಗೆ ಹೋಗಿ ಬಂದ ನಂತರ ಅವರಿಗೆ ವೈರಲ್ ಫೀವರ್ ಕಾಣಿಸಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು, ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮಳೆಯಲ್ಲಿ ನೆನೆದು ಜ್ವರ ಬಂದಿದೆ. ಕೋವಿಡ್ ಪಾಸಿಟಿವ್ ಅಲ್ಲ ಎಂದಿದ್ದಾರೆ.

ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 22ರಿಂದ 24ರ ತನಕ ಮುಂಬೈ, 25 ಹೈದ್ರಾಬಾದ್, 26 ಬೆಂಗಳೂರಿನಲ್ಲಿ ಪ್ರಚಾರದಲ್ಲಿ ಚಿತ್ರದ ತೊಡಗಿಸಿಕೊಳ್ಳಲಿದ್ದಾರೆ ಹಾಗೂ 27ಕ್ಕೆ ದುಬೈನಲ್ಲಿ ನಡೆಯುವ ಪ್ರೀಮಿಯರ್ ಶೋಗೆ ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!