ಕುರಿ ಪ್ರತಾಪ ಈಗ ಹೀರೋ..

316

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಕುರಿ ಪ್ರತಾಪ ಯಾರಿಗೆ ಗೊತ್ತಿಲ್ಲ ಹೇಳಿ. ಕಾಮಿಡಿ ಕಾರ್ಯಕ್ರಮದ ಮೂಲಕ ಬದುಕು ಕಟ್ಟಿಕೊಂಡ ಕಲಾವಿದ. ದೊಡ್ಡ ದೊಡ್ಡ ಸ್ಟಾರ್ ಜೊತೆ ಸ್ಕ್ರೀನ್ ಷೇರ್ ಮಾಡಿರುವ ಕಾಮಿಡಿಯನ್. ಬಿಗ್ ಸ್ಕ್ರೀನ್ ಗೂ ಸೈ.. ಸ್ಮಾಲ್ ಸ್ಕ್ರೀನ್ ಗೂ ಸೈ ಎನ್ನುವ ಕುರಿ ಪ್ರತಾಪ, ಇದೀಗ ಹೀರೋ ಆಗಿ ಕಾಣಿಸಿಕೊಳ್ತಿದ್ದಾರೆ.

ಯೆಸ್, ಪ್ರಕಾಶ ಕುಮಾರ ನಿರ್ದೇಶನ ಮಾಡ್ತಿರುವ ಆರ್.ಸಿ ಬ್ರದರ್ಸ್ ಅನ್ನೋ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡು ಹೀರೋ ಆದ ನಟರ ಸಾಲಿಗೆ ಕುರಿ ಪ್ರತಾಪ ಸೇರ್ಪಡೆಯಾಗ್ತಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಅವರು, ಮೊದಲ ಬಾರಿಗೆ ನಟನಾಗಿ ಕಾಣಿಸಿಕೊಳ್ತಿರುವುದು ಖುಷಿಯ ವಿಚಾರ. ಹೀರೋ ಆದ್ಮೇಲೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಸಹಜವಾಗಿ ಹೀರೋ ಆದ್ಮೇಲೆ ಪೋಷಕ ಪಾತ್ರಗಳಲ್ಲಿ ನಟಿಸಲು ಹಿಂದೇಟು ಹಾಕ್ತಾರೆ. ಆದ್ರೆ, ನಾನು ಹಾಗಲ್ಲವೆಂದು ನಟ ಕುರಿ ಪ್ರತಾಪ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!