ಬೈಕ್ ಅಪಘಾತ: ನಟ ಸಂಚಾರಿ ವಿಜಯ ಸ್ಥಿತಿ ಗಂಭೀರ

316

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ನೇಹಿತ ನವೀನ ಜೊತೆ ಶನಿವಾರ ತಡರಾತ್ರಿ ಜಯನಗರದ 7ನೇ ಬ್ಲಾಕ್ ನಲ್ಲಿ ನಡೆದಿದೆ. ಸ್ನೇಹಿತ ನವೀನಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿಂಬದಿ ಕುಳುತ್ತಿದ್ದ ನಟ ಸಂಚಾರಿ ವಿಜಯಗೆ ಗಂಭೀರ ಗಾಯಗಳಾಗಿವೆ.

ಗಾಯಗೊಂಡಿದ್ದ ಅವರನ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲು ಹೋದ್ರೆ ಬೆಡ್ ಇಲ್ಲವೆಂದು ಹೇಳಿದ್ದಾರೆ. ಇದ್ರಿಂದ ಚಿಂತೆಗೆ ಒಳಗಾದ ಕುಟುಂಬ ನಟ ಸುದೀಪ ಸಂಪರ್ಕಿಸಿದೆ. ತಕ್ಷಣ ಅವರ ನೆರವಿಗೆ ಬಂದ ಕಿಚ್ಚ ಸುದೀಪ, ಅಪೋಲೋ ಆಸ್ಪತ್ರೆ ಸಿಇಓ ಜೊತೆಗೆ ಮಾತ್ನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ.

ನಟ ಸಂಚಾರಿ ವಿಜಯಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, 48 ಗಂಟೆಗಳ ಸಮಯ ನೀಡಲಾಗಿದೆ. ನನ್ನ ಸಹೋದರಿನಿಗಾಗಿ ಪ್ರಾರ್ಥಿಸಿ ಎಂದು ಸಹೋದರ ವಿಜಯ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ನಟ ನಿನಾಸಂ ಸತೀಶ, ವಿಜಯಗೆ ಏನೂ ಅಪಾಯವಿಲ್ಲ. ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ ಎಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!