ನಟಿ ಸಂಜನಾ ವಿರುದ್ಧದ 2019 ಪ್ರಕರಣಕ್ಕೆ ಮರುಜೀವ

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಬಂದ್ಮೇಲೆ ಸೈಲೆಂಟ್ ಆಗಿರುವ ನಟಿ ಸಂಜನಾ ಗರ್ಲಾನಿ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಅದು 2019ರಲ್ಲಿ ಕ್ಲಬ್ ವೊಂದರಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ.

2019ರಲ್ಲಿ ಲ್ಯಾವೆಲ್ ರಸ್ತೆಯಲ್ಲಿನ ಕ್ಲಬ್ ವೊಂದರಲ್ಲಿ ನಟಿ ಸಂಜನಾ ಹಾಗೂ ಮಾಡೆಲ್ ವಂದನಾ ಜೈನ್ ನಡುವೆ ಗಲಾಟೆ ನಡೆದಿತ್ತು. ವಂದನಾ ಮೇಲೆ ಸಂಜನಾ ವಿಸ್ಕಿ ಎರೆಚಿ ಹಲ್ಲೆ ಮಾಡಿದ್ದಾರಂತೆ. ಅಲ್ದೇ, ಆಕೆಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ವಂದನಾ ಜೈನ್ ದೂರು ನೀಡಿದ್ರು. ಇದೀಗ ಕೋರ್ಟ್ ನೀಡಿರುವ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಕ್ರಮ ಜರುಗಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!